ಬಂಟ್ವಾಳ : ತಾಲೂಕಿನ ಸಜಿಪಮೂಡ ಗ್ರಾಮದ ಕಾರಾಜೆ ನೂರುಲ್ ಹುದಾ ಜುಮಾ ಮಸೀದಿ ಆಶ್ರಯದಲ್ಲಿ 16ನೇ ಸ್ವಲಾತ್ ಮಜ್ಲಿಸ್ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳು ಮಾರ್ಚ್ 23 ಹಾಗೂ 24 ರಂದು ಮಸೀದಿ ವಠಾರದ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ಮಸೀದಿ ಖತೀಬ್ ಒ.ಕೆ. ಸಯೀದ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಅಧ್ಯಕ್ಷ ಕೆ. ಶೇಖಬ್ಬ ಹಾಜಿ ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಅಮೀರ್ ಅಸ್ಸಖಾಫ್ ತಂಙಳ್ ನಾದಾಪುರ ಸ್ವಲಾತ್ ಮಜ್ಲಿಸ್ ನೇತೃತ್ವ ವಹಿಸಲಿದ್ದು, ಮಿತ್ತೂರು ಕೆಜಿಎನ್ ದಅವಾ ಕಾಲೇಜು ಮುದರ್ರಿಸ್ ಮುಹಮ್ಮದ್ ಹುಸೈನ್ ಅಹ್ಸನಿ ಅಲ್-ಮುಈನಿ ಮುಖ್ಯ ಭಾಷಣಗೈಯುವರು ಎಂದು ಮಸೀದಿ ಪ್ರಕಟಣೆ ತಿಳಿಸಿದೆ.
