Sunday, October 22, 2023

’ಧಾರ್ಮಿಕ ಕ್ಷೇತ್ರಗಳು ಸಾಮೂಹಿಕ ಶ್ರದ್ಧಾಕೇಂದ್ರಗಳಾಗಿ ಸಮಾಜಕ್ಕೆ ಬೆಳಕಾಗಬೇಕು’-ಮಾಣಿಲಶ್ರೀ

Must read

ವಿಟ್ಲ: ಧಾರ್‍ಮಿಕ ಕ್ಷೇತ್ರಗಳು ಸಾಮೂಹಿಕ ಶ್ರದ್ಧಾಕೇಂದ್ರಗಳಾಗಿ ಸಮಾಜಕ್ಕೆ ಬೆಳಕಾಗಬೇಕು. ರವೀಶ್ ಕೆ. ಎನ್. ಅವರು ಖಂಡಿಗ ಶಿವಕ್ಷೇತ್ರವನ್ನು ನಿರ್‍ಮಿಸಿ ಸಮಾಜದ ಮಧ್ಯೆ ಭಕ್ತಿಶಕ್ತಿಯ ಪಾವನ ಕ್ಷೇತ್ರವಾಗಿ ಸಮರ್ಪಿಸಿದ್ದಾರೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು,  ಕೇಪು ಖಂಡಿಗ ಶ್ರೀ ಕೈಲಾಸೇಶ್ವರ ದೇವ ಸನ್ನಿಧಿಯಲ್ಲಿ ಮಂಗಳವಾರ ನೂತನವಾಗಿ ನಿರ್ಮಾಣವಾದ ಶಿಲಾಮಯ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶದ ಅಂಗವಾಗಿ ನಡೆದ ಗ್ರಾಮ ಗ್ರಾಮಗಳ ಸಂಗಮ ಕಾರ್‍ಯಕ್ರಮದಲ್ಲಿ ಆಶೀರ್ವಚನ ನೀಡಿದ್ದಾರೆ. ಈ ದೇಗುಲವು ಸಮಾಜದ ಧಾರ್‍ಮಿಕ, ಆಧ್ಯಾತ್ಮಿಕ ಕ್ಷೇತ್ರವಾಗಿದೆ ಬೆಳೆಯುತ್ತಿದೆ ಎಂದರು.
ಹೊಸ್ಮಾರು ಬಲ್ಯೊಟ್ಟು ಶ್ರೀ ಗುರುಕೃಪಾ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ದೇಗುಲಗಳಲ್ಲಿ ಭಗವಂತನ ಸಾಕ್ಷತ್ಕಾರವಾಗುತ್ತದೆ. ಭಗವಂತನಿಗೆ ಶರಣಾಗಿ ಆರಾಧಿಸಿದಾಗ ಭಗವಂತನ ಅನುಗ್ರಹವಾಗುತ್ತದೆ ಎಂದರು.
ವಿಟ್ಲ ಅರಮನೆಯ ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಮಿತಿ ಗೌರವಾಧ್ಯಕ್ಷ ಉದ್ಯಮಿ ಸುಬ್ರಾಯ ಪೈ, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಪ್ರತಿನಿಧಿ ಗಣಪತಿ ಪದ್ಯಾಣ, ಹಿರಿಯರಾದ ಶ್ರೀನಿವಾಸ ರೈ ಕುಂಡಕೋಳಿ, ಶ್ರೀ.ಕ್ಷೇ.ಧ. ಯೋಜನೆಯ ಸಂದೇಶ್, ಬೊಳ್ನಾಡು ಭಗವತೀ ಕ್ಷೇತ್ರದ ಕಾರ್‍ಯದರ್ಶಿ ಆನಂದ ಕಲ್ಲಕಟ್ಟ, ಕೋಶಾಧಿಕಾರಿ ಶ್ರೀಧರ ಅಳಿಕೆ, ನಾಗೇಶ್, ತಾರಾನಾಥ ಆಳ್ವ ಕುಕ್ಕೆಬೆಟ್ಟು, ಸುರೇಶ್ ಬನಾರಿ, ಕೃಷ್ಣ, ದಿನೇಶ್ ನಾಯ್ಕ ಪಟ್ಟುಮೂಲೆ, ಕಲ್ಲೆಂಚಿಪಾದೆ ಮಹಾದೇವಿ ಭಜನ ಮಂಡಳಿ ಅಧ್ಯಕ್ಷ ಚೆನ್ನಪ್ಪ ಅಳಿಕೆ, ಪತ್ರಕರ್ತ ವಿಷ್ಣುಗುಪ್ತ ಪುಣಚ, ಪತ್ರಕರ್ತ ನಿಶಾಂತ್ ಬಿಲ್ಲಂಪದವು, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಉಪಸ್ಥಿತರಿದ್ದರು.
ಕ್ಷೇತ್ರದ ಆಡಳಿತ ಮೊಕ್ತೇಸರ ರವೀಶ್ ಕೆ. ಎನ್. ಖಂಡಿಗ ಸ್ವಾಗತಿಸಿದರು. ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ಸದಾಶಿವ ಅಳಿಕೆ ನಿರೂಪಿಸಿದರು. ಕಾರ್‍ಯದರ್ಶಿ ಸುರೇಶ್ ನಾಯ್ಕ ಕೋಡಂದೂರು ವಂದಿಸಿದರು. ಬಳಿಕ ಮಣಿಕಂಠ ಮಹಿಮೆ ಎಂಬ ತುಳು ನಾಟಕ ನಡೆಯಿತು.

More articles

Latest article