Wednesday, October 25, 2023

ಕಳ್ಳಿಗೆಯಲ್ಲಿ ಗ್ಯಾಸ್ ವಿತರಣೆ

Must read

ಬಂಟ್ವಾಳ: ಪ್ರಧಾನಿ ಮೋದಿಜೀ ನೂರಕ್ಕೂ ಅಧಿಕ ಜನಪರ ಯೋಜನೆಗಳನ್ನು ದೇಶದ ಜನರಿಗೆ ನೀಡಿದ್ದಾರೆ. ಅದರಲ್ಲಿ 60ಕ್ಕಿಂತಲೂ ಅಧಿಕ ಯೋಜನೆಗಳು ಮಹಿಳೆಯರಿಗೆ ಸಂಬಂಧಪಟ್ಟಂತಹ ಯೋಜನೆಗಳು. ಇಂತಹ ಜನಪರ ಯೋಜನೆಗಳಲ್ಲಿ ಉಜ್ವಲ ಯೋಜನೆ ಭಾರೀ ಮಹತ್ವವನ್ನು ಪಡೆದಿದೆ ಎಂದು ದ.ಕ. ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.
ಅವರು ಬುಧವಾರ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಉಜ್ವಲ ಫಲಾನುಭವಿಗಳಿಗೆ ಗ್ಯಾಸ್ ಕಿಟ್ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಹಿಳೆಯರು ಅಬಲೆಯರಲ್ಲ ಪ್ರಬಲೆಯರು. ಹಿಂದಿನ ಕಾಲದಲ್ಲಿ ಹೆಣ್ಣು ಮಗುವಿನ ಬಗ್ಗೆ ಇದ್ದಂತಹ ಕೀಳರಿಮೆ ಇಂದು ದೂರವಾಗಿದೆ. ಮಹಿಳೆಯರಿಗೆ ಸ್ಥೈರ್ಯ ನೀಡುವಂತಹ ಕೆಲಸವನ್ನು ಕಳೆದ 5 ವರ್ಷಗಳ ಅವಧಿಯಲ್ಲಿ ಮೋದಿಜಿ ಮಾಡಿದ್ದಾರೆ. ಬಾಲ್ಯದಿಂದಲೇ ಕಷ್ಟದ ದಿನಗಳನ್ನು ಬಹಳ ಹತ್ತಿರದಿಂದ ಕಂಡಿರುವ ಮೋದೀಜಿ, ತನ್ನ ತಾಯಿ ಪಡುತ್ತಿದ್ದ ಕಷ್ಟವನ್ನು ಭಾರತದ ಯಾವೊಬ್ಬ ತಾಯಿಯೂ ಪಡಬಾರದು ಎಂದು ಸಂಕಲ್ಪ ತೊಟ್ಟು ಹೊಗೆಮುಕ್ತ ದೇಶದ ನಿರ್ಮಾಣಕ್ಕಾಗಿ ಉಜ್ವಲ ಯೋಜನೆಯನ್ನು ಪ್ರಕಟಿಸಿದರು ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್, ನಮ್ಮ ದೇಶಕ್ಕೆ ಸಮರ್ಥ ನಾಯಕತ್ವ ದೊರೆತಿದೆ. ಇಂದು ಪಾರದರ್ಶಕ ಆಡಳಿತ ವ್ಯವಸ್ಥೆ ನಿರ್ಮಾಣವಾಗಿದೆ.ಪ್ರತಿಯೊಂದು ಯೋಜನೆ ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ದೊರಕುವಂತಾಗಿದೆ. ಜನರ ತೆರಿಗೆ ಹಣ ಸದ್ವಿನಿಯೋಗವಾಗುತ್ತಿದೆ. ಹೀಗಾಗಿ ಭಾರತ ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿದೆ. ಕಳೆದ ಐದು ವರ್ಷಗಳ ಮೋದೀಜಿ ಆಡಳಿತದಲ್ಲಿ ಭಾರತ ಅಭಿವೃದ್ಧಿಯಲ್ಲಿ ನಂ.5ನೇ ಸ್ಥಾನಕ್ಕೆ ಬಂದುನಿಂತಿದೆ. ಮುಂದಿನ ಐದು ವರ್ಷಗಳಿಗೆ ಮತ್ತೊಮ್ಮೆ ಮೋದಿಜೀ ಪ್ರಧಾನಿಯಾದರೆ ಅಭಿವೃದ್ಧಿಯಲ್ಲಿ ಭಾರತ ಜಗತ್ತಿನ ನಂ.1 ದೇಶವಾಗಿ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಕಳ್ಳಿಗೆ ಬಿಜೆಪಿ ಮಹಿಳಾ ಕಾರ್ಯಕರ್ತರು ಕಮಲ ದೀಪ ನೆರವೇರಿಸಿದರು. ಬಳಿಕ ಶಾಸಕ ರಾಜೇಶ್ ನಾಯ್ಕ್ ಉಜ್ವಲ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಬಂಟ್ವಾಳ್, ಕಳ್ಳಿಗೆ ಬಿಜೆಪಿ ಪ್ರಭಾರಿ ಪುರುಷೋತ್ತಮ ಶೆಟ್ಟಿ ವಾಮದಪದವು, ಪ್ರಮುಖರಾದ ಮೋನಪ್ಪ ದೇವಸ್ಯ, ಪಂಚಾಯಿತಿ ಸದಸ್ಯೆಯರಾದ ಯಶೋಧಾ ಜಾರಂದಗುಡ್ಡೆ, ರೇವತಿ ಮಾಡಂಗೆ, ಸರಸ್ವತಿ ನೆತ್ರಕೆರೆ, ಸ್ಥಳೀಯ ಮುಖಂಡೆರಾಯಿನ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಹರಿಣಾಕ್ಷಿ ಜಾರಂದಗುಡ್ಡೆ, ಶಶಿಪ್ರಭಾ ಗುತ್ತೆತ್ತಿಲ್, ಮನೋಜ್ ವಳವೂರು, ಗಣೇಶ್ ಪಚ್ಚಿನಡ್ಕ, ವಿಕ್ಟರ್ ಡಿ’ಸೋಜಾ, ರಾಹುಲ್ ಪಚ್ಚಿನಡ್ಕ ಮತ್ತಿತರರಿದ್ದರು. ದೇವಿಪ್ರಸಾದ್ ಎಂ. ಸ್ವಾಗತಿಸಿದರು. ಮನೋಹರ ಕಂಜತ್ತೂರು ವಂದಿಸಿದರು. 3 ಹಂತಗಳಲ್ಲಿ ಇಲ್ಲಿಯವರೆಗೆ ಒಟ್ಟು 70 ಫಲಾನುಭವಿಗಳಿಗೆ ಉಜ್ವಲ ಅನಿಲ ಕಿಟ್ ವಿತರಿಸಲಾಯಿತು.

More articles

Latest article