Sunday, October 22, 2023

ಮಾ.9ರಂದು ಕಲ್ಲಡ್ಕದಲ್ಲಿ ವಿ.ವಿ. ಮಟ್ಟದ ನೃತ್ಯಭಜನಾ ಸ್ಪರ್ಧೆ ವಿಠೋಬ ವಿಠಲ-2019

Must read

ಬಂಟ್ವಾಳ: ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ಕಾಲೇಜು ವಿಠೋಬ ವಿಠಲ 2019 ಎಂಬ ಹೆಸರಿನ ನೃತ್ಯ ಭಜನಾ ಸ್ಪರ್ಧೆ ಮಾ.9ರಂದು ಶನಿವಾರದಂದು ಬೆಳಗ್ಗೆ 10ಕ್ಕೆ ಕಾಲೇಜಿನ ಪ್ರೇರಣಾ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ (ಪರೀಕ್ಷಾಂಗ) ಪ್ರೊ.ವಿ.ರವೀಂದ್ರಾಚಾರಿ ಉದ್ಘಾಟಸಲಿದ್ದಾರೆ. ಅಭ್ಯಾಗತರಾಗಿ ಯುವ ಸಂಘಟಕರು, ಅಂಕಣಕಾರರಾದ ವಿಕಾಸ್ ಪುತ್ತೂರು, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಆಗಮಿಸಲಿದ್ದಾರೆ. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕರಾದ ಉದಯ ಬಾರ್ಕೂರು, ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

More articles

Latest article