Wednesday, October 18, 2023

ಸ್ಪರ್ಶ ಕಲಾಮಂದಿರದಲ್ಲಿ ಜಾತ್ರೋತ್ಸವ-ಕಲಾಮೇಳ

Must read

ಬಿ.ಸಿ.ರೋಡು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರಿಂದ ಶನಿವಾರದಿಂದ ದೋಸೆ ಮೇಳ, ಮುಗಿಲೆತ್ತರಕ್ಕೆ ಸುತ್ತುವ ತೊಟ್ಟಿಲು, ಕೊಲಂಬಸ್, ಬ್ರೇಕ್‌ಡ್ಯಾನ್ಸ್, ಡ್ರ್ಯಾಗನ್ ಟ್ರೈನ್, ಬೋಟಿಂಗ್, ಜಂಪಿಂಗ್ ಇದೆಲ್ಲ ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯುತ್ತಿದೆ ಎಂದು ಕಾರ್ಯಕ್ರಮದ ಮೇಲ್ವಿಚಾರಕ ಸುಭಾಶ್ಚಂದ್ರ ಜೈನ್ ತಿಳಿಸಿದರು.
ಅವರು ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಟಪುರ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಬಂಟ್ವಾಳ ಜಾತ್ರೋತ್ಸವ, ಕಲಾಮೇಳ ಪ್ರಯುಕ್ತ ಬಂಟ್ವಾಳದ ಜನತೆಗೆ ಸಾಂಸ್ಕೃತಿಕ ಹಾಗೂ ಮನೋರಂಜನೆ ನೀಡುವ ನಿಟ್ಟಿನಲ್ಲಿ ಮಾರ್ಚ್ ೧೭ರ ತನಕ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದ್ದು, ದಿನನಿತ್ಯ ರಾತ್ರಿ ೭.೩೦ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಾಮದಪದವು ಹವ್ಯಾಸಿ ಕಲಾವಿದರಿಂದ ಕದಂಬ ಕೌಶಿಕೆ ಯಕ್ಷಗಾನ, ವಿಟ್ಲ ಲಲಿತ ಕಲಾ ಸದನದವರಿಂದ ನೂಪೂರೋತ್ಸವ, ನಲ್ಕೆಮಾರ್ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ಪುಂಜಾಲಕಟ್ಟೆ ತಾಂಬೂಲ ಕಲಾವಿದರಿಂದ ಇಂಚಲಾ ಉಂಡಾ.. ನಂಬರೆ ಆಪುಜಿ ಹಾಸ್ಯಮಯ ನಾಟಕ, ನರಿಕೊಂಬು-ಬೋಳಂತೂರು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈಭವ, ವಗ್ಗ ಶಾರದಾ ಕಲಾವಿದರಿಂದ ಪೊರ್‍ಲಾವೊಡು ಈ ಬದಕ್ ಹಾಸ್ಯಮಯ ನಾಟಕ,  ನೃತ್ಯ ಸಿಂಚನ, ಕಾರ್ಕಳ ಯುವಚೇತನ ಕಲಾವಿದರಿಂದ ತೂಪುನಾರ್ ತೂಪೆರ್ ತುಳು ನಾಟಕ, ಬಿ.ಸಿ.ರೋಡು ಎಕ್ಸ್‌ಟ್ರೀಂ ಡ್ಯಾನ್ಸ್ ಕ್ರ್ಯೂ ಇವರಿಂದ ಫಿಲ್ಮಿ ಡ್ಯಾನ್ಸ್ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಮಹಾವಸ್ತುಪ್ರದರ್ಶನ ಮೇಳ, ನಾವುಕೇಳುವ ತುಂಟ ಪ್ರಶ್ನೆಗಳಿಗೆ ಕತ್ತೆಯಿಂದ ಉತ್ತರ, ಡ್ರೈಫುಟ್ಸ್, ಖಾದ್ಯಗಳು, ಪಾನೀಯಗಳು, ನೂತನ ಶೈಲಿಯ ತಿಂಡಿತಿನಸುಗಳು ಇದೆ ಎಂದು ಜಾತ್ರೋತ್ಸವದ ಪಾಲುದಾರ ನಜೀಮ್ ತಿಳಿಸಿದರು.

More articles

Latest article