Tuesday, September 26, 2023

ಕಕ್ಯಪದವು ಶ್ರೀ ಬ್ರಹ್ಮಬದರ್ಕಳ ಗರಡಿ ಕ್ಷೇತ್ರ ಕೊಡಿಮರ ತೈಲಾಧಿವಾಸ ಕಾರ್ಯಕ್ರಮ

Must read

ಬಂಟ್ವಾಳ: ಸುಮಾರು ೩ ಕೋ.ರೂ. ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ನಿರ್ಮಾಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಶ್ರೀ ಕೊಡಮಣಿತ್ತಾಯಿ ಬ್ರಹ್ಮಬದರ್ಕಳ ಗರಡಿ ಕ್ಷೇತ್ರದಲ್ಲಿ ನೂತನ ಕೊಡಿಮರದ ತೈಲಾಧಿವಾಸ ಕಾರ್ಯಕ್ರಮ ಶುಕ್ರವಾರ ಜರಗಿತು.
ಕ್ಷೇತ್ರದ ಆಸ್ರಣ್ಣ ರಾಜೇಂದ್ರ ಅರ್ಮುಡ್ತಾಯ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುಮಾರು ಮೂವತ್ತೇಳುವರೆ ಅಡಿ ಉದ್ದದ ಕೊಡಿಮರವನ್ನು ಶುದ್ಧ ಎಳ್ಳೆಣ್ಣೆಯಲ್ಲಿ ನೆನೆಸಿಡಲಾಗುತ್ತಿದೆ. ಈ ಮೂಲಕ ಕೊಡಿಮರ ಗಾಳಿ, ಮಳೆಯ ಪ್ರಭಾವದಿಂದ ನಶಿಸದಂತೆ ಕಾಪಿಡಲು ಹಿರಿಯರು ವೈಜ್ಞಾನಿಕವಾಗಿ ಕಂಡು ಕೊಂಡ ಮಾರ್ಗವಾಗಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಭಕ್ತಾಽಗಳು ಕೊಡಿಮರಕ್ಕೆ ಎಳ್ಳೆಣ್ಣೆ ಸಮಿರ್ಪಿಸಿದರು. ಬಳಿಕ ಬ್ರಹ್ಮ ಬದರ್ಕಳ ಗರಡಿಯ ಮರದ ಮೇಲ್ಛಾವಣಿಗೆ ನಿರ್ಮಾಣ ಮುಹೂರ್ತ ನಡೆಯಿತು.
ಕ್ಷೇತ್ರ ಪುನರ್ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಗೌರವ ಸಲಹೆಗಾರರಾದ ರತ್ನ ಕುಮಾರ ಆರಿಗ ನಾಲ,ಕೊಡಿಮರ ದಾನಿ ಪಟ್ಟದಬಲು ಕೃಷ್ಣ ಪ್ಪ ಮಾಸ್ಟರ್, ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿತ್ತ, ಪುನರ್ನಿರ್ಮಾಣ ಸಮಿತಿ ಪದಾಽಕಾರಿಗಳಾದ ಎ.ಚೆನ್ನಪ್ಪ ಸಾಲ್ಯಾನ್ ಆಜೋಡಿ, ದಾಮೋದರ ನಾಯಕ್, ಸಂಪತ್ ಕುಮಾರ್ ಶೆಟ್ಟಿ, ಸಂಜೀವ ಪೂಜಾರಿ ಕೇರ್ಯ, ಡಾ| ದಿನೇಶ್ ಬಂಗೇರ, ಡೀಕಯ ಬಂಗೇರ ಕರ್ಲ, ವೀರೇಂದ್ರ ಕುಮಾರ್ ಜೈನ್,ಜಯ ಶೆಟ್ಟಿ ಕಿಂಜಾಲು, ಚೆನ್ನಪ್ಪ ಪೂಜಾರಿ ತಿಮರಡ್ಡ, ನಾರಾಯಣ ಪೂಜಾರಿ ಬಿತ್ತ, ಡೀಕಯ ಸಾಲ್ಯಾನ್, ಲೋಕಯ ನಾಯ್ಕ, ರಾಮಪ್ಪ ಪೂಜಾರಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ವಾಸುದೇವ ಮಯ್ಯ, ಗಣೇಶ ಕೆ., ಶ್ರೀಧರ ಆಚಾರ್ಯ, ಸದಾನಂದ ಗೌಡ, ಚೇತನ್‌ಎಚ್., ಜಯಾನಂದ ಪೂಜಾರಿ, ಡೀಕಯ್ಯ ಕುಲಾಲ್, ಚಂದ್ರಶೇಖರ ಕೆ., ಗುರುಪ್ರಕಾಶ್, ರಾಜೀವ, ಸುಂದರ ದೇವಾಡಿಗ, ಪ್ರದೀಪ್, ಶ್ರೀ ಕ್ಷೇ.ಧ.ಯೋಜನೆ ಸೇವಾ ಪ್ರತಿನಿಽ ಶೇಖರ ಕಂಚಲಪಲ್ಕೆ, ಉತ್ಸವ ಸಮಿತಿಯ ಪದಾಧಿಕಾರಿಗಳಾದ ಪರಮೇಶ್ವರ, ರಾಮಯ್ಯ ಭಂಡಾರಿ, ರಾಜೇಂದ್ರ, ಡೀಕಯ್ಯ ಪೂಜಾರಿ, ವಸಂತ ಆರ್., ನವೀನ್ ಶೆಟ್ಟಿ, ತಾರಾನಾಥ , ಬಾಬು ನಾಯ್ಕ ಮತ್ತಿತರರು ಭಾಗವಹಿಸಿದ್ದರು.

 

More articles

Latest article