Thursday, October 26, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-35

Must read

ಪಾಕ್ -ಭಾರತ ಯುದ್ಧ ಸಮರ ಒಂದೆಡೆಯಾದರೆ, ಮತ್ತೊಂದೆಡೆ ಶಿವರಾತ್ರಿ ಹಬ್ಬದ ಸಡಗರ. ದಂಡು ದಂಡಾಗಿ ಧರ್ಮಸ್ಥಳಕ್ಕೆ ಬರುತ್ತಿರುವ ಪಾದಯಾತ್ರಿಗಳ ಸಾಲು.ಮತ್ತೊಂದೆಡೆ ವಿದ್ಯಾರ್ಥಿಗಳ ಪರೀಕ್ಷಾ ತಯಾರಿ, ಬಂದ ಜೀವನ ಪರೀಕ್ಷೆಗಳು. ಜಾತ್ರೆ, ಕೋಲ, ಪೂಜೆ, ಮದುವೆಗಳ ಸಾಲು. ಹಾಗೆಯೇ ಚುನಾವಣೆಯ ಕಾವು.
ತುಂಬಾ ಬ್ಯುಸಿಯಾದ ಈ ತಿಂಗಳಿನಲ್ಲಿ ಇದೀಗ ಪರೀಕ್ಷೆ ಬರೆಯುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಲ್ ದ ಬೆಸ್ಟ್. ಮುಂದೆ ಪರೀಕ್ಷೆ ಬರೆಯಲಿರುವ ಹತ್ತನೇ ತರಗತಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಆಲ್ ದ ಬೆಸ್ಟ್ ನೊಂದಿಗೆ ಸ್ಟಡಿ ವೆಲ್. ಪೂರ್ವ ತಯಾರಿ ಚೆನ್ನಾಗಿರಲಿ.
ಜೀವನದ ಏರು ತಗ್ಗುಗಳನ್ನು ಸರಿದೂಗಿಸಿಕೊಂಡು, ಸಂಯಮದಲ್ಲಿ ತನ್ನ ಸ್ಥಿರ ಗುರಿಯತ್ತ ಮುನ್ನಡೆವ ತಾಳ್ಮೆ ಇರಲಿ. ಕಠಿಣ ಪರಿಶ್ರಮವೇ ಸಾಧನೆಯ ರಹಸ್ಯವೆಂಬುದು ತಿಳಿದಿರಲಿ.
ಪರೀಕ್ಷೆಯಲ್ಲಿ ತಾವಂದುಕೊಂಡ ಅಂಕಗಳು ದೊರಕದಿದ್ದರೂ ಹಲವಾರು ದಾರಿಗಳು, ಕವಲುಗಳು ನಿಮಗಾಗಿ ತೆರೆದುಕೊಂಡಿವೆ. ನುಗ್ಗಲು ದಾರಿಗಳು ಅನೇಕ ಇವೆ. ಹಾಗಾಗಿ ಹೆದರ ಬೇಕೆಂದಿಲ್ಲ.
ಈಗಾಗಲೇ ಪರೀಕ್ಷೆ ಮುಗಿಸಿರುವ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ತಮ್ಮ ಸಮಯ ಹಾಳು ಮಾಡಿಕೊಳ್ಳದೆ ಮುಂದಿನ ತರಗತಿಯ ಓದಿನ ಸಿದ್ಧತೆ ಅಥವಾ ಕುಟುಂಬಕ್ಕೆ ದುಡಿದು ಸಹಕರಿಸಬಹುದು. ಕಂಪ್ಯೂಟರ್, ರಿಪೇರಿಗಳು, ಟ್ರೈನಿಂಗ್ ಗಳನ್ನು ಪಡೆದು ಕಲಿಯಬಹುದು. ಟ್ಯೂಷನ್ ನಡೆಸಬಹುದು. ನೃತ್ಯ ಕಲಿಯಬಹುದು. ಒಟ್ಟಾರೆ ನಿಮ್ಮ ಅಮೂಲ್ಯ ಸಮಯ ಹಾಳಾಗದಿರಲಿ.
ಜೀವನ ನಿಮ್ಮದೇ. ಹಲವಾರು ವಿಷಯಗಳನ್ನು ಕಲಿಯಿರಿ. ಕಲಿಕೆ ನಿರಂತರ. ಡ್ರೈವಿಂಗ್, ಟೂ ವೀಲರ್ ಕಲಿಕೆಯೂ ಆಗಬಹುದು. ಒಟ್ಟಿನಲ್ಲಿ ಸಮಯದ ಸದುಪಯೋಗವಾಗಲಿ.
ಜೀವನದಲ್ಲಿ ಯಾವುದಾದರೊಂದು ಸಮಯದಲ್ಲಿ ನಾವು ಓದಿದ ವಿಚಾರಗಳು, ಕಲಿತ ಕಲಿಕೆ ಉಪಯೋಗಕ್ಕೆ ಬರುವುದು ಖಂಡಿತ. ಆದ್ದರಿಂದ ಕಲಿಕೆ ಬಾಳಿನಲ್ಲಿ ಸದಾ ಇರಲಿ. ಅದು ನಿಮ್ಮ ಸಹಾಯಕ್ಕೆ ಬರಲಿ. ಆ ಶಿವನು ಸರ್ವರ ಹರಸಿ ಆಶೀರ್ವದಿಸಲಿ. ಭಾರತದ ಯೋಧರಿಗೆ ಜಯವಾಗಲಿ. ನೀವೇನಂತೀರಿ!?

 

@ಪ್ರೇಮ್@

More articles

Latest article