ವಿಟ್ಲ: 15 ವರ್ಷಗಳ ಹಿಂದೆ ನಿವೇಶನ ಮಂಜೂರಾತಿಯಾಗಿದ್ದು ಫಲಾನುಭವಿಗಳು ಗ್ರಾಮದಲ್ಲಿ ವಾಸ್ತವ್ಯ ಇರುವುದಿಲ್ಲ. ಆದ್ದರಿಂದ ಈಗಾಗಲೇ ಆಗಿರುವ ಮಂಜೂರಾತಿಯನ್ನು ರದ್ದು ಮಾಡಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ ಹೊಸದಾಗಿ ನಿವೇಶನ ಮಂಜೂರಾತಿ ಮಾಡಬೇಕು ಎಂದು ಇಡ್ಕಿದು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಇಡ್ಕಿದು ಗ್ರಾ.ಪಂ. ಸಭಾಭವನದಲ್ಲಿ ನಡೆದ ಸಭೆಯಲ್ಲಿ ನಾನಾ ಬೇಡಿಕೆಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಈಗಾಗಲೇ ನಿವೇಶನ ಕೋರಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ನೀಡಲು 10 ಎಕರೆ ಜಮೀನು ಕಾದಿರಿಸಲು ಸರಕಾರಿ ಜಮೀನು ಗುರುತಿಸಲಾಗಿದ್ದು ಮಂಜೂರಾತಿಗಾಗಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಕಳುಹಿಸುವ ಬಗ್ಗೆ, ಪ್ರತಿ ಗ್ರಾಮ ಪಂಚಾಯತ್‌ಗೆ 20 ಮನೆಗಳು ನಿಗಮದಿಂದ ಮಂಜೂರಾಗಿದ್ದು, ಈಗಾಗಲೇ ನಿಗಮದ ವೆಬ್‌ಸೈಟ್‌ನಲ್ಲಿ ದಾಖಲಿಸಿ ಅನುಮೋದಿತ ಪಟ್ಟಿಯಲ್ಲಿ ಅರ್ಹಫಲಾನುಭವಿಗಳನ್ನು ಗುರುತಿಸಿ ಮನೆಯನ್ನು ನಿಯಾಮಾನುಸಾರ ನಿರ್‍ಮಾಣ ಮಾಡಿ ಶೀಘ್ರವಾಗಿ ಪೂರ್ಣಗೊಳಿಸುವವರಿಗೆ ಆದ್ಯತೆ ನೀಡುವುದು. ಕ್ರಿಯಾ ಯೋಜನೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಗೊಳಿಸಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಬಗ್ಗೆ, ಬೇಸಿಗೆಯ ದಿನಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಜಾಗೃತ ವಹಿಸಲು ಪಂಪು ಚಾಲಕರಿಗೆ ಸೂಚನೆ ನೀಡಲಾಯಿತು. ನಳ್ಳಿ ನೀರಿನ ಸಂಪರ್ಕಕ್ಕೆ ಅರ್ಜಿಯನ್ನು ಪಡೆಯುವ ಸಂದರ್ಭದಲ್ಲಿ ನೀರಿನ ಲಭ್ಯತೆಯನ್ನು ಪರಿಗಣಿಸಿಸುವುದು ಮತ್ತು ವೈಯುಕ್ತಿಕವಾಗಿ ಕೊಳವೆ ಬಾವಿಯಲ್ಲಿ ಹೊಂದಿರುವವರಿಗೆ ನೀಡದಿರುವ ಬಗ್ಗೆ ಚರ್ಚಿಸಲಾಯಿತು.
2019-18 ನೇ ಸಾಲಿನ ಆಯವ್ಯಯ ತಯಾರಿಸಿ ಅನುಮೋದಿಸಲಾಯಿತು. ಕಟ್ಟಡ ತೆರಿಗೆಯನ್ನು ಶೇ. 65 ರಷ್ಟು ವಸೂಲು ಮಾಡಲಾಗಿದೆ. ಬಾಕಿ ಇರುವ ಶೇ.೩೫ ನ್ನು ವಸೂಲಾತಿಯನ್ನು ಮಾರ್ಚ್ ಅಂತ್ಯದೊಳಗೆ ವಸೂಲಿಸಿ ಶೇ. 100 ಗುರಿ ಸಾಧಿಸಲು ಬಿಲ್ಲು ವಸೂಲಿಗರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸೂಚಿಸುತ್ತಾ ಉಸ್ತುವಾರಿಯನ್ನು ನೋಡುವಂತೆ ಕಾರ್‍ಯದರ್ಶಿಯವರಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಾವತಿ, ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು, ಸದಸ್ಯರಾದ ಚಿದಾನಂದ ಪೆಲತ್ತಿಂಜ , ಜಯರಾಮ ಕಾರ್‍ಯಾಡಿಗುತ್ತು, ಸತೀಶ ಕೆಂರ್ದೆಲು, ಹಿಮಾಕರ ಗಾಣಿಗ, ಜನಾರ್ಧನ ಕಂಪ , ರಮೇಶ ಸೂರ್‍ಯ, ಕೇಶವ ಉರಿಮಜಲು, ರಸಿಕಾ, ರತ್ನ , ಪ್ರೇಮ, ಆಶಾ, ವಸಂತಿ, ಶಾರದಾ, ಜಗದೀಶ್ವರಿ ಉಪಸ್ಥಿತರಿದ್ದರು.
ಪಿಡಿಒ ಗೋಕುಲ್‌ದಾಸ್ ಭಕ್ತ ಸ್ವಾಗತಿಸಿದರು. ಕಾರ್‍ಯದರ್ಶಿ ಅಜಿತ್ ಕುಮಾರ್ ವಂದಿಸಿದರು. ಪಂಚಾಯಿತಿ ಲೆಕ್ಕ ಸಹಾಯಕರು ಸಿಬ್ಬಂದಿ ವರ್ಗ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here