ಲೋಕಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣೆ ಆಯೋಗ ಭಾನುವಾರ ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು ಏಳು ಹಂತದದಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿದೆ.



ಏ.11ರಂದು ಮೊದಲ ಹಂತದ ಮತದಾನ, ಏ.18ರಂದು 2ನೇ ಹಂತದ ಮತದಾನ, ಏ.23ರಂದು ಮೂರನೇ ಹಂತದ ಮತದಾನ, ಏ.29ರಂದು ನಾಲ್ಕನೇ ಹಂತದ ಮತದಾನ, ಮೇ 6 ಐದನೇ ಹಂತದ ಮತದಾನ, ಮೇ 12 ಆರನೇ ಹಂತದ ಮತದಾನ ಹಾಗೂ ಮೇ 19ಕ್ಕೆ ಏಳನೇ ಹಾಗೂ ಕೊನೆ ಹಂತದ ಮತದಾನ ನಡೆಯಲಿದೆ.
ಕರ್ನಾಟಕದಲ್ಲಿ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏ.18ರಂದು ಮೊದಲ ಹಂತದ ಮತದಾನ ಹಾಗೂ ಏ.23ರಂದು ಎರಡನೇ ಹಂತದ ಮತದಾನ ನಡೆಯಲಿದೆ.
ದಿನಾಂಕ ಘೋಷಣೆಯಾದ ಕೂಡಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಸರಕಾರ ಯಾವುದೇ ಪ್ರಮುಖ ನಿರ್ಧಾರಗಳು ಹಾಗೂ ಹೊಸ ಯೋಜನೆಗಳನ್ನು ಪ್ರಕಟಿಸುವಂತಿಲ್ಲ.