Sunday, October 22, 2023

ಧರ್ಮಸ್ಥಳದಲ್ಲಿ ನಿಖಿಲ್ ಕುಮಾರಸ್ವಾಮಿ: ಚುನಾವಣೆಯಲ್ಲಿ ಗೆದ್ದು ಮಂಡ್ಯದ ಜನರ ಋಣ ತೀರಿಸುತ್ತೇನೆ.

Must read

ಉಜಿರೆ: ಜೆ.ಡಿ.ಎಸ್. ಪಕ್ಷದ ವರಿಷ್ಠರ ತೀರ್ಮಾನಕ್ಕೆ ತಾನು ಬದ್ದನಾಗಿದ್ದೇನೆ ಹಾಗೂ ಸಿದ್ದನಾಗಿದ್ದೇನೆ. ಅವರೇ ನನಗೆ ಸ್ಪೂರ್ತಿಯ ಸೆಲೆ ಹಾಗೂ ಮಾರ್ಗದರ್ಶಕರು. ಅವರು ತನಗೆ ಕೊಟ್ಟ ಜವಾಬ್ದಾರಿಯಿಂದ, ಸಮರ್ಪಕವಾಗಿ ನಿರ್ವಹಿಸುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಹೇಳಿದರು.

ಅವರು ಸೋಮವಾರ ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದು ಕೊನೆ ಉಸಿರಿನ ವರೆಗೂ ಮಂಡ್ಯದ ಜನರ ಸೇವೆ ಮಾಡಿ ಋಣ ತೀರಿಸುತ್ತೇನೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ತನಗೆ ಗೆಲುವು ಖಚಿತ ಎಂದು ಅವರು ತಿಳಿಸಿದರು.
ಚುನಾವಣೆಯಲ್ಲಿ ಸುಮಲತಾ ಸ್ಪರ್ಧೆ ಬಗ್ಗೆ ಪ್ರಸ್ತಾಪಿಸಿದಾಗ ಈ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಧರ್ಮಸ್ಥಳ ಭೇಟಿಯ ಉದ್ದೇಶ: ಶಿವ ನಮ್ಮ ಮನೆ ದೇವರು. ಪ್ರತಿ ವರ್ಷ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಹೆಗ್ಗಡೆಯವರ ಆಶೀರ್ವಾದ ಪಡೆಯುತ್ತೇನೆ.
ಸೋಮವಾರ ಹಾಗೂ ಶಿವರಾತ್ರಿ ಸಂದರ್ಭವಾದುದರಿಂದ ದೇವರ ದರ್ಶನ ಮಾಡಿ ರಾಜ್ಯದಲ್ಲಿ ಜನರು ಸುಖ-ಶಾಂತಿ, ನೆಮ್ಮದಿಯಿಂದ ಬದುಕುವಂತಾಗಲಿ. ಮಳೆ-ಬೆಳೆ ಚೆನ್ನಾಗಿ ಆಗಿ ರೈತರು ಸದಾ ಸಂತೋಷದಿಂದ ಬದುಕುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ನಿಖಿಲ್ ಕುಮಾರ ಸ್ವಾಮಿ ಹೇಳಿದರು.

More articles

Latest article