ಬಂಟ್ವಾಳ: ವಿಷಪ್ರಾಸಣ ಸೇವಸಿ ವ್ಯಕ್ತಿಯೋರ್ವನು ಮ್ರತಪಟ್ಟ ಘಟನೆ ಬಂಟ್ವಾಳದ ಅಮ್ಟಾಡಿಯಲ್ಲಿ ನಡೆದಿದೆ.
ಬಂಟ್ವಾಳ ಅಮ್ಟಾಡಿ ಕಿನ್ನಿಬೆಟ್ಟು ನಿವಾಸಿ ಕ್ರಷ್ಣ ಮೂಲ್ಯ (45) ಅವರು ಮ್ರತಪಟ್ಟ ವ್ಯಕ್ತಿ.
ಮೇಸ್ತ್ರಿ ಕೆಲಸ ಮಾಡುತ್ತಿದ್ದ ಇವರು ವಿಪರೀತ ಕುಡಿತದ ಚಟಕ್ಕೆ ಒಳಗಾಗಿದ್ದ ರು.
ಇಂದು ಬೆಳಿಗ್ಗೆ ಮನೆಯ ಸಮೀಪ ನಡೆಯುವ ಕಾರ್ಯಕ್ರಮ ವೊಂದಕ್ಕೆ ಇವರ ಪತ್ನಿ ತೆರಳಿದ್ದರು.
ಊಟ ಮುಗಿಸಿ ಮನೆಗೆ ಬಂದಾಗ ಮನೆಯ ಒಳಗೆ ಬಿದ್ದು ಬಾಯಿಯಲ್ಲಿ ನೊರೆ ಬರುತ್ತಿದ್ದ ಕ್ರಷ್ಣ ಅವರನ್ನು ನೋಡಿದ ಪತ್ನಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ಕ್ಕೆ ಕರೆತಂದು ಪರೀಕ್ಷೆ ಮಾಡಿದಾಗ ಇವರು ಮ್ರತಪಟ್ಟಿರುವುದಾಗಿ ದ್ರಡಪಟ್ಟಿದೆ ಎಂದು ಮನೆಯವರು ತಿಳಿಸಿದ್ದಾರೆ.
ವಿಪರೀತ ಕುಡಿತದ ಚಟ ಹೊಂದಿರುವ ಇವರು ವಿಷಪ್ರಾಸಣ ಸೇವಿಸಿ ಮ್ರತಪಟ್ಟಿರಬೇಕು ಎಂದು ಶಂಕಿಸಲಾಗಿದೆ.
ಬಂಟ್ವಾಳ ನಗರ ಠಾಣಾ ಎಸ್. ಐ.ಹಾಗೂ ಸಿಬ್ಬಂದಿ ಗಳು ಆಸ್ಪತ್ರೆ ಗೆ ಬೇಟಿ ಮುಂದಿನ ಕ್ರಮಕೈಗೊಂಡಿದ್ದಾರೆ.
