ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಬೊಂಡಾಲ ನಿವಾಸಿ ಕೇಶವ ಪೂಜಾರಿ ( 60) ಮ್ರತಪಟ್ಟ ವರು.
ಪಾಣೆಮಂಗಳೂರು ಗುಂಡೂರು ಆತ್ಮರಂಜನ್ ಎಂಬವರ ತೆಂಗಿನತೋಟದಲ್ಲಿ ತೆಂಗಿನಮರದಿಂದ ಕಾಯಿ ತೆಗೆಯುವ ಸಂದರ್ಭದಲ್ಲಿ ತೆಂಗಿನಮರದಿಂದ ಬಿದ್ದು ಗಂಬೀರ ಗಾಯಗೊಂಡಿದ್ದರು.
ಇವರನ್ನು ಮನೆಯವರು ಸೇರಿ ಆಸ್ಪತ್ರೆ ಗೆ ದಾಖಲು ಮಾಡಲು ಸಾಗಿಸುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ಅವರು ತಿಳಿಸಿದ್ದಾರೆ.
ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಹಾಗೂ ಸಿಬ್ಬಂದಿ ಮುರುಗೇಶ್ ಅವರು ಸ್ಥಳಕ್ಕೆ ಬೇಟಿ ನೀಟಿ ಪ್ರಕರಣ ದಾಖಲಿಸಿದ್ದಾರೆ.
