Sunday, October 22, 2023

ಲಾರಿ ಡಿಕ್ಕಿ ಬೈಕ್ ಸಹಸವಾರ ಸಾವು

Must read

ಬಂಟ್ವಾಳ: ಲಾರಿಯೊಂದು ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಗಂಬೀರ ಗಾಯಗೊಂಡು ಸಹಸವಾರ ಮ್ರತಪಟ್ಟ ಘಟನೆ ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮದಲ್ಲಿ ನಡೆದಿದೆ.
ಕಲ್ಲಡ್ಕ ಸಮೀಪದ ಬಿ.ಆರ್.ನಗರ ಬಾಳ್ತಿಲ ನಿವಾಸಿ ಪ್ರಶಾಂತ್ (25) ಮ್ರತಪಟ್ಟ ಯುವಕ .‌
ಬರಿಮಾರ್ ನಿವಾಸಿ ಯೋಗೀಶ್ ಅವರು ಗಂಭೀರ ಗಾಯಗೊಂಡು ಮಂಗಳೂರು ವೆನ್ ಲಾಕ್ ಆಸ್ಪತ್ರೆ ಗೆ ದಾಖಲಾದ ಘಟನೆ ನಡೆದಿದೆ.
ಇವರಿಬ್ಬರೂ ಮೇಸ್ತ್ರಿ ಕೆಲಸ ಮಾಡುವವರಾಗಿದ್ದು ದೇವಸ್ಯಪಡೂರು ಎಂಬಲ್ಲಿ ಕೆಲಸದ ವಿಚಾರವಾಗಿ ಮಾತನಾಡಲು ಹೋಗುತ್ತಿದ್ದ ವೇಳೆ ಪಾಣತ್ತಬೈಲು ಎಂಬಲ್ಲಿ ಅತೀ ವೇಗವಾಗಿ ರಾಂಗ್ ಸೈಡ್ ನಲ್ಲಿ ಬಂದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಹಸವಾರ ಸ್ಥಳದಲ್ಲಿ ಮ್ರತಪಟ್ಟರೆ ಸವಾರ ಗಂಭೀರ ಪ್ರಮಾಣದ ಗಾಯಗಳಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮಂಜುಳಾ, ಎ.ಎಸ್.ಐ. ಕುಟ್ಟಿ ಹಾಗೂ ಸಿಬ್ಬಂದಿ ಗಳು ಬೇಟಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.

More articles

Latest article