ಬಂಟ್ವಾಳ: ಶ್ರೀ ಜಗದಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರ (ರಿ). ದೇವಿನಗರ ದಡ್ಡಲಕಾಡು ಇದರ 5 ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ಮಾ.27 ಬುಧವಾರದಿಂದ ಎ.6 ರ ಶನುವಾರದವರೆಗೆ ಅಖಂಡ ನವಾಹ ಭಜನಾ ಸಂಕೀರ್ತನೆ ಹಾಗೂ ಪ್ರತಿಷ್ಠಾ ವರ್ಧಂತ್ಯುತ್ಸವ , 58 ನೇ ವರ್ಷಾವಧಿ ಮಹೋತ್ಸವ , ಸಾಮೂಹಿಕ ನವಚಂಡಿಕಾ ಯಾಗ ರಂಗಪೂಜೆ, ಹಾಗೂ ಮಾರಿ ಪೂಜಾ ಉತ್ಸವ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಶ್ರೀ ಸತ್ಯನಾರಾಯಣ ಭಟ್ ಶಿವಕ್ಷೇತ್ರ ಇಜ್ಜ ಇವರ ನೇತ್ರತ್ವದಲ್ಲಿ ” ಲೋಕಕಲ್ಯಾಣಾರ್ಥವಾಗಿ ಕ್ಷೇತ್ರದ ಶ್ರೇಯೋಭಿವ್ರದ್ದಿ ಹಾಗೂ ಊರಿನ ಸುಭೀಕ್ಷೆಗಾಗಿ ಅಖಂಡ ನವಾಹ ಭಜನಾ ಸಂಕೀರ್ತನೋತ್ಸವ ವು ವಿವಿಧ ವೈಧಿಕ , ಧಾರ್ಮಿಕ ಕ್ರಿಯಾಕಲಾಪಗಳೊಂದಿಗೆ ಜರಗಲಿದೆ ಎಂದು ತಿಳಿಸಿದ್ದಾರೆ.
