Thursday, April 11, 2024

ಕಾನೂನು ಶಿಕ್ಷಣ ಕ್ಷೇತ್ರದ ಅಪ್ರತಿಮ ಸಾಧಕಿ ಡಾ| ಶಶಿಕಲಾ ಗುರುಪುರ

ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಹುದ್ದೆಗೇರಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆ
ಮುಂಬಯಿ: ಕರ್ನಾಟಕದ ಕರಾವಳಿಯ ಮಂಗಳೂರು ಗ್ರಾಮಂತರ ಪ್ರದೇಶದ ಗ್ರಾಮೀಣ ಬದುಕಿನೊಂದಿಗೆ ಗುರುಪುರ ಎಂಬ ಪುಟ್ಟ ಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು, ಕಾನೂನು ಶಿಕ್ಷಣದಲ್ಲಿ ಉನ್ನತ ಪದವಿ ಗಳಿಸಿರುವ ಡಾ| ಶಶಿಕಲಾ ಗುರುಪುರ ಈ ಬಾರಿ ಕರ್ನಾಟಕ ಸರ್ಕಾರದ 2018-19ನೇ ಸಾಲಿನ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಗಳಿಸಿದ್ದರೆ.

ಮಂಗಳೂರು ಎಸ್‌ಡಿಎಂ ಮತ್ತು ಮೈಸೂರಿನಲ್ಲಿ ಕಾನೂನು ಶಿಕ್ಷಣದಲ್ಲಿ ರ್‍ಯಾಂಕಿನೊಂದಿಗೆ ಉನ್ನತ ಪದವಿ ಮುಗಿಸಿದ್ದಾರೆ. ಬೆಂಗಳೂರಿನ ಎನ್‌ಎಲ್‌ಎಸ್‌ಐಯು, ಎಸ್‌ಡಿಎಂ ಕಾನೂನು ಕಾಲೇಜು ಮಂಗಳೂರು, ಮಾಹೆ ಮಣಿಪಾಲದ ‘ಮಣಿಪಾಲ ಸಂವಹನ ಸಂಸ್ಥೆ, ಐರ್‍ಲೆಂಡಿನ ಕೋರ್ಕ್ ಕಾಲೇಜ್‌ನಲ್ಲಿ ಕಾನೂನು ಉಪನ್ಯಾಸಕಿ’ ಆಗಿ ಸುಮಾರು 24 ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ಕಾನೂನು ವಿಷಯದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ದೇಶ ವಿದೇಶ ತಿರುಗಾಡಿದ್ದಾರೆ. ಈಗ ಪುಣೆಯ ಸಿಂಬಯೋಸಿಸ್ ಕಾನೂನು ಕಾಲೇಜ್‌ನ ನಿರ್ದೇಶಕಿ ಹಾಗೂ ಕಾನೂನು ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳಾ ಕಾನೂನು, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ, ಮಹಿಳಾವಾದ-ಕಾನೂನು ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿರುವ ಇವರು, ತುಳುನಾಡಿನ ಸಂಸ್ಕೃತಿ ಮತ್ತು ಬದುಕಿನ ಬಗ್ಗೆಯೂ ವಸ್ತುನಿಷ್ಟ ವಾಗ್ಮಿಯಾಗಿದ್ದಾರೆ.

ಡಾ| ಶಶಿಕಲಾ ನ್ಯಾಯಶಾಸ್ತ್ರ, ಮಾಧ್ಯಮ ಕಾನೂನುಗಳು, ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳು, ಶಿಕ್ಷಣ ಮತ್ತು ಅಧ್ಯಯನ ವಿಧಾನಶಾಸ್ತ್ರ, ಮಹಿಳಾ ಕಾನೂನು ಅಧ್ಯಯನ, ಜೈವಿಕತಂತ್ರಜ್ಞಾನ ಕಾನೂನು, ಕಾನೂನು ಮತ್ತು ಸಾಮಾಜಿಕ ರೂಪಾಂತರದಂತಹ ವಿಷಯಗಳ ಬೋಧನೆ ಮತ್ತು ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. 65 ಮಾಸ್ಟರ್ ಮತ್ತು 12 ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. 60 ಲೇಖನ ಯಾ ಸಂಶೋಧನಾ ಪೇಪರ್, ಸಹ-ಲೇಖಕರಾಗಿ ಎರಡು ಪುಸ್ತಕ ಮತ್ತು 12 ಇವತ ಪುಸ್ತಕ ಇವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಂತಿವೆ.

1991ರಲ್ಲಿ ಭಾರತ ರಾಷ್ಟ್ರೀಯ ಕಾನೂನು ಶಾಲೆಯ ಸಮುದಾಯ ಆಧರಿತ ಪ್ರಶಸ್ತಿ ವಿಜೇತ ಕಾನೂನು ಸುಧಾರಣೆಗಳ ಯೋಜನೆಗೆ ಮಾರ್ಗದರ್ಶಕರಾಗಿದ್ದ ಇವರು, 1999-2004ರವರೆಗೆ ಇಂಗ್ಲೆಂಡಿನ ಡಬ್ಲ್ಯೂಎಸಿಸಿ ಪ್ರಾಯೋಜಕತ್ವದ ಮಹಿಳಾ ಸಂವಹನದ ಏಪ್ಯನ್ ನೆಟ್‌ವರ್ಕಿನಲ್ಲಿ ಸಂಶೋಧನಾ ಪ್ರಾಜೆಕ್ಟ್ ಮತ್ತು ಪ್ರಕಾಶನದ ಸಲಹೆಗಾರರಾಗಿದ್ದರು. 2001ರಲ್ಲಿ ಫೋರ್ಡ್ ಫೌಂಡೇಶನ್ ಆನ್ ಜೆಂಡರ್ ಅಡ್ವಕಸಿಯಡಿ ಎನ್‌ಪಿಎಸ್ ಸೆಕ್ಟರ್ ಸಂಶೋಧನಾ ಅನುದಾನ ಪಡೆದಿದ್ದರು. 2007ರಿಂದ ಕಮ್ಯುನಿಟಿ ಲೀಗಲ್ ಸರ್ವಿಸ್ ಪ್ರಾಜೆಕ್ಟ್ ಅನುದಾನ ದೊಂದಿಗೆ (ಈಗಿನ ಪುಣೆಯ ಎಸ್‌ಎಲ್‌ಎಸ್) ಅನೇಕ ಕಾನೂನು ಮತ್ತು ಸಮುದಾಯ ಆಧರಿತ ಕಾನೂನು ಕ್ಷೇತ್ರದಲ್ಲಿ ಪ್ರಶಸ್ತಿ-ಪುರಸ್ಕಾರ ಮುಡಿಗೇರಿಸಿಕೊಂಡಿದ್ದಾರೆ.

ಇತ್ತೀಚೆಗೆ ಪ್ರಕಟಗೊಂಡ ಲೆಕ್ಸಿಸ್-ನೆಕ್ಸಿಸ್‌ನ ‘ಭಾರತದ 100 ಮಂದಿ ಕಾನೂನು ಪರಿಣತರ’ ಪಟ್ಟಿಯಲ್ಲಿ ಡಾ. ಶಶಿಕಲಾ ಹೆಸರು ಸೇರಿಕೊಂಡಿದೆ. ಈ ಪಟ್ಟಿಯಲ್ಲಿ ಡಾ| ಎನ್.ಆರ್ ಮಾಧವ ಮೆನನ್, ಇಂದ್ರ ಜೈಸಿಂಗ್, ಅರುಣ್ ಜೇಟ್ಲಿ, ಅಡ್ವಕೇಟ್ ರಾಮ್ ಜೇಠ್ಮಾಲಾನಿ ಮೊದಲಾದವರ ಹೆಸರಿದೆ. ಪುಣೆಯಲ್ಲಿ ಕಾರಾಗೃಹ ಮತ್ತು ಮಹಿಳೆಯರಿಗೆ ಎಸ್‌ಎಲ್‌ಎಸ್ ಸಮುದಾಯ ಕಾನೂನು ಸೇವೆಗೆ ಇವರು ಮಾರ್ಗದರ್ಶಕರಾಗಿದ್ದು, ಈ ಕೆಲಸಕ್ಕೆ 2016ರಲ್ಲಿ ಹರ್ಬರ್ಟ್ ಸ್ಮಿತ್ ಫ್ರೀಹಿಲ್ಸ್ ಅನುದಾನ ಪ್ರಾಪ್ತಿಯಾಗಿತ್ತು.

ಬಿಜಾಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ 2003ರಿಂದಲೂ ಸಕ್ರಿಯವಾಗಿರುವ ಇವರು, ಪ್ರಸಕ್ತ ವಿವಿಯ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಮಹಿಳಾ ವೇಶ್ಯೆಯರ ಸ್ಥಿತಿಗತಿ ಅಧ್ಯಯನದ 2017ರ ಡಾ. ಜಯಮಾಲಾ ಸಮಿತಿ ವರದಿಯಲ್ಲಿ ಇವರು ತಜ್ಞ ಸಲಹೆಗಾರರಾಗಿದ್ದರು. ದೇಶದ ಕಾನೂನು ಆಯೋಗದ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

2018ರ ನವಂಬರಿನಲ್ಲಿ ವಾಷಿಂಗ್ಟನ್ ಡಿ.ಸಿಯಲ್ಲಿ ವಿಶ್ವಬ್ಯಾಂಕಿನ ಪ್ರಧಾನಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಾಗತಿಕ ಕಾನೂನು ನ್ಯಾಯ ಮತ್ತು ಅಭಿವೃದ್ಧಿ ಸಪ್ತಾಹದಲ್ಲಿ ಇವರು ಆಹ್ವಾನಿತ ಭಾಷಣಕಾರರಾಗಿದ್ದರು. ಇದೇ ರೀತಿ ಭಾರತದಲ್ಲಿ ಭವಿಷ್ಯದ ಕಾನೂನು ಶಿಕ್ಷಣದ ವಿಷಯದಲ್ಲಿ ಹಾರ್ವರ್ಡ್ ಕಾನೂನು ಸ್ಕೂಲ್ ಸಮಾವೇಶದಲ್ಲಿ ಭಾಷಣ ಮಾಡಿದ್ದರು.

ಮಾಹಿತಿ: ಧನಂಜಯ ಗುರುಪುರ

More from the blog

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...