Friday, October 27, 2023

ಬುರೂಜ್ : ಟಾಟಾ ಬಿಲ್ಡಿಂಗ್ ಇಂಡಿಯಾ ಪ್ರಬಂಧ ಸ್ಪರ್ಧೆಯಲ್ಲಿ 6 ಪದಕಗಳು

Must read

ಬಂಟ್ವಾಳ : ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಬಂಟ್ವಾಳ ಇಲ್ಲಿ ಟಾಟಾರವರ 150ನೇ ವರ್ಷದ ಸವಿನೆನಪಿಗಾಗಿ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ ವಿಭಾಗದ ಸ್ಪರ್ಧೆಗಳಲ್ಲಿ ದಿಯಾ ಎಸ್.ಶೆಟ್ಟಿ ಪ್ರಥಮ, ಸಹೀಮ ದ್ವಿತೀಯ, ಮತ್ತು ಮೈತ್ರಿ ಜಿ.ಪಿ. ತೃತೀಯ ಸ್ಥಾನ ಹಾಗೂ ಹೈಸ್ಕೂಲ್ ವಿಭಾಗದ ಸ್ಪರ್ಧೆಯಲ್ಲಿ ತೃಪ್ತಿ ಸಿ. ಶೆಟ್ಟಿ ಪ್ರಥಮ, ನಿಮ್ರಾ ಬಾನು ದ್ವಿತೀಯ ಮತ್ತು ತಬಸ್ಸುಮ್ ತೃತೀಯ ಸ್ಥಾನಗಳಿಸಿ ಸಂಸ್ಥೆಗೆ ಒಟ್ಟು 2 ಚಿನ್ನ, 2 ಬೆಳ್ಳಿ ಮತ್ತು 2 ಕಂಚಿನ ಪದಕ ಗಳಿಸುವುದರೊಂದಿಗೆ ಸಂಸ್ಥೆಗೆ ಹೆಸರು ತಂದಿರುತ್ತಾರೆ. ಸಂಸ್ಥೆಯ ಸಾಧನೆಗೆ ಟಾಟಾ ಮಾರ್ಕೆಟಿಂಗ್ ಮತ್ತು ಕಾರ್ಪೊರೇಟ್ ಬ್ರಾಂಡ್‌ನ ಸೀನಿಯರ್ ಉಪಾಧ್ಯಕ್ಷರಾದ  ಅತುಲ್ ಅಗರ್‌ವಾಲ್‌ರವರು ಸಂಸ್ಥೆಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿರುತ್ತಾರೆ. ಪದಕ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಚಾಲಕರಾದ ಜನಾಬ್ ಶೇಕ್ ರಹ್ಮತ್ತುಲ್ಲಾಹ್ ಅಭಿನಂದಿಸಿದರು ಮತ್ತು ಶಿಕ್ಷಕ ವೃಂದ ಅಭಿನಂದಿಸಿರುತ್ತಾರೆ.

More articles

Latest article