Sunday, October 22, 2023

ಬೊರಿಮಾರ್ ಚರ್ಚ್ ನಲ್ಲಿ ವಿಶೇಷ ಧ್ಯಾನ ಕೂಟ

Must read

ಬಂಟ್ವಾಳ: ಶತಮಾನೋತ್ತರ ಬೆಳ್ಳಿ ಹಬ್ಬ ಆಚರಣಾ ಹೊಸ್ತಿಲಲ್ಲಿರುವ ಸಂತ ಜೋಸೆಫರ ದೇವಾಲಯ ಬೊರಿಮಾರ್ ನಲ್ಲಿ ಪ್ರಾಯಶ್ಚಿತ ಕಾಲದ ವಿಶೇಷ ಧ್ಯಾನ ಕೂಟವನ್ನು ಮಾರ್ಚ್ 20 ರಿಂದ 24 ರ ತನಕ ಏರ್ಪಡಿಸಲಾಗಿತ್ತು. ವಿಶೇಷ ಧ್ಯಾನ ಕೂಟದ ಪ್ರಸ್ತುತಿ ಮತ್ತು ಪ್ರಸಂಗದಾರರಾಗಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪರು ಆದ ಅತೀ ವಂದನೀಯ ಡಾ| ಲಾರೆನ್ಸ್ ಮುಕ್ಕುಝಿಯವರು ಆಗಮಿಸಿದ್ದರು.

ಕಳೆದ ಐದು ದಿವಸಗಳಲ್ಲಿ ನೂರಾರು ಭಕ್ತಾದಿಗಳು ಪ್ರಾರ್ಥನಾ ಕೂಟದಲ್ಲಿ ಭಾಗವಹಿಸಿದ್ದರು. ಪ್ರಾಯಶ್ಚಿತ ಕಾಲದಲ್ಲಿ ಇಂತಹ ಧ್ಯಾನ ಕೂಟವನ್ನು ಏರ್ಪಡಿಸಿದ ಪಾಲನಾ ಸಮಿತಿಯವರಿಗೆ ಧರ್ಮಾಧ್ಯಕ್ಷರು ಅಬಿನಂದಿಸಿದರು. ಬಿಷಪರನ್ನು ಪಾಲನಾ ಸಮಿತಿಯ ಪರವಾಗಿ ಚರ್ಚ್ ಧರ್ಮ ಗುರು ವಂದನೀಯ ಗ್ರೆಗರಿ ಪಿರೇರಾ ರವರು ಶಾಲು ಮತ್ತು ಹಣ್ಣು ಹಂಪಲುಗಳನ್ನು ನೀಡಿ ಸನ್ಮಾನಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ರವರು ಗೌರವ ಸನ್ಮಾನ ಪತ್ರ ಓದಿ ಹಸ್ತಾಂತರಿಸಿದರು. ಬೆಂಗಳೂರಿನಿಂದ ಆಗಮಿಸಿ ಬ್ರದರ್ ಆಂಟನಿ ರಾಜ್ ಮತ್ತು ತಂಡದವರು ಗೀತೆಗಳನ್ನು ಹಾಡಿದರು. ನೆರೆದ ಎಲ್ಲಾ ಭಕ್ತಾಧಿಗಳಿಗೆ ಭೊಜನದ ವ್ಯವಸ್ಥೆ ಮಾಡಲಾಗಿತ್ತು.

More articles

Latest article