ವಿಟ್ಲ : ಝಮಾನ್ ಬೊಯ್ಸ್ ಕಲ್ಲಡ್ಕ, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಪಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇದರ ಸಹಬಾಗಿತ್ವದಲ್ಲಿ ರಕ್ತದಾನ ಶಿಬಿರ ಕಲ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆದಿತ್ಯವಾರ ನಡೆಯಿತು.
ಕಾರ್ಯಕ್ರಮವನ್ನು ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಇಸ್ಮಾಯಿಲ್ ಫೈಝಿ ಉದ್ಘಾಟಿಸಿದರು.ಅಧ್ಯಕ್ಷತೆ ವಹಿಸಿಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಿದ್ದೀಕ್ ಪನಾಮ ಮಾತನಾಡಿ ದಾರಿ ತಪ್ಪುತ್ತಿರುವ ಯುವ ಸಮೂಹದ ಮಧ್ಯೆ ಇಂತಹ ಯುವ ಮನಸ್ಸುಗಳು ಸಮಾಜ ಸೇವೆಗಾಗಿ ಮಿಡಿದದ್ದು ಪ್ರಶಂಶನೀಯ , ಭವಿಷ್ಯದ ಮಾದರಿ ಯುವಕರಾಗುವುದರೊಂದಿಗೆ ಕೇವಲ ಕ್ರೀಡಾ ಚಟುವಟಿಕೆ ಮಾತ್ರವಲ್ಲದೆ ಇಂತಹ ಮಹೋನ್ನತ ಕಾರ್ಯವನ್ನು ಸಂಘಟಿಸಿರುವ ಝಮಾನ್ ಬೊಯ್ಸ್ ನ ತಮ್ಮ ಸಮಾಜಮುಖಿ ಚಿಂತನೆಯನ್ನು ಜನತೆಗೆ ತೋರಿಸಿಕೊಟ್ಟಿದ್ದಾರೆ ಎಂದರು.

ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ ಮಾತನಾಡಿ ನಮ್ಮ ಸಂಸ್ಥೆ ಕಳೆದ 5 ವರ್ಷಗಳಿಂದ 178ಕ್ಕೂ ಅಧಿಕ ಶಿಬಿರಗಳನ್ನು ಆಯೋಜಿಸಿಕೊಂಡು 15,000ಕ್ಕಿಂತಲೂ ಮಿಗಿಲಾಗಿ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ರಕ್ತ ಪೂರೈಸಿದ್ದೇವೆ ಎಂದರು.
ದ.ಕ ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅದ್ಯಕ್ಷ ಲತೀಫ್ ನೇರಳಕಟ್ಟೆ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ವೈಜ್ಞಾನಿಕ ಸಂಶೋಧನೆಗಳಿಂದ ಎಲ್ಲವನ್ನೂ ಮಾಡಲು ಸಾದ್ಯವಾಗಿದ್ದರೂ ರಕ್ತ ಮಾತ್ರ ಇನ್ನೋರ್ವ ದಾನಿಯಿಂದಲೇ ಪಡೆಯಬೇಕಾಗಿದೆ, ಜಾತಿ ಧರ್ಮಗಳ ಭೇದಭಾವವಿಲ್ಲದೆ ಜೀವಕ್ಕೆ ಮರುಜೀವ ನೀಡಲು ಸಹಕಾರಿಯಾಗುವ ಶಕ್ತಿ ರಕ್ತದಾನಿಗಳಿಗಿದೆ ಎಂದರು.
ಉದ್ಯಮಿಗಳಾದ ದಯಾನಂದ ಆಚಾರ್ಯ ಸೌದಿ ಅರೇಬಿಯಾ, ಸಮಾಜ ಸೇವಕರಾದ ಹಕೀಂ ಕಲ್ಲಡ್ಕ, ಡಿ.ಕೆ.ಅಝ್ಮಲ್ ಕಾಂತಡ್ಕ, ಸಿದ್ದೀಕ್ ಜಿ.ಎಸ್, ಐ ಎನ್ ಶಾಪಿ ಕಲ್ಲಡ್ಕ, ಜಾಫರ್ ಕಲ್ಲಡ್ಕ, ಕಾಸಿಂ ಕಲ್ಲಡ್ಕ, ಝಮಾನ್ ಬಾಯ್ಸ್ ಗೌರವಾಧ್ಯಕ್ಷ ರಹಿಮಾನ್ ಕೆ.ಸಿ. ರೋಡ್, ಹಜಾಜ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಇಮ್ತಿಯಾಝ್ ಗೋಳ್ತಮಜಲು, ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿ ಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.
ಈ ಯಶಸ್ವೀ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ 133 ಮಂದಿ ರಕ್ತದಾನಗೈದರು. ಬ್ಲಡ್ ಡೋನರ್ಸ್ ಮಂಗಳೂರು ತಂಡದ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ, ಅಶ್ರಫ್ ಉಪ್ಪಿನಂಗಡಿ, ಮಾಸ್ಟರ್ ಮಹಮ್ಮದ್ ಫಾಝಿಲ್ ಉಪಸ್ಥಿತರಿದ್ದರು.

ಸನ್ಮಾನ
ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಕಾರ್ಯ ನಿರ್ವಾಹಕ ಫಾರೂಕ್ ಬಿಗ್ ಗ್ಯಾರೇಜ್ ಹಾಗೂ ಲತೀಫ್ ಉಪ್ಪಿನಂಗಡಿ ಅವರನ್ನು ಸನ್ಮಾನಿಸಲಾಯಿತು.
ಝಮಾನ್ ಬೊಯ್ಸ್ ಅಧ್ಯಕ್ಷ ಮನ್ಸೂರ್ ಕಲ್ಲಡ್ಕ ಸ್ವಾಗತಿಸಿ , ನಝೀಮುದ್ದೀನ್ (ನಜಿಮಿ) ವಂದಿಸಿದರು. ಬ್ಲಡ್ ಡೋನರ್ಸ್ ಮಂಗಳೂರು ಕಾರ್ಯ ನಿರ್ವಾಹಕ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.

*ರಕ್ತದಾನ ಮಾಡಿದ ಸೆವೆನ್ ಬ್ರದರ್ಸ್*

ಅಂಡರ್ ಆರ್ಮ್ ಕ್ರಿಕೆಟ್ ಪಟುಗಳು,ಕಲ್ಲಡ್ಕ ನಿವಾಸಿಗಳು, ಒಡಹುಟ್ಟಿದ ಸಹೋದರರುಗಳಾದ ರಶೀದ್ ಬಾಬ, ಹೈದರ್, ಇಕ್ಬಾಲ್, ರಿಯಾಝ್, ಮುನಾಝ್, ನವಾಝ್, ಹಾಗೂ ಜುನೈದ್ ರಕ್ತದಾನ ಮಾಡುವ ಮೂಲಕ ಶಿಬಿರದಲ್ಲಿ ಗಮನ ಸೆಳೆದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here