ಬಂಟ್ವಾಳ : ಬಿ.ಸಿ.ರೋಡ್‌ನ ಸರ್ವಿಸ್ ರಸ್ತೆಯಲ್ಲಿ ಈ ಹಿಂದಿನಂತೆ ಶುಕ್ರವಾರ  ಖಾಸಗಿ, ಸರಕಾರಿ ಬಸ್‌ಗಳ ಸಂಚಾರ ಪುನರಾರಂಭಗೊಂಡಿದೆ.    ಬಂಟ್ವಾಳ ಎಎಸ್ಪಿ ಸೈದುಲ್ ಅಡಾವತ್ ಅವರು ಸರ್ವಿಸ್ ರಸ್ತೆಯಲ್ಲಿ ಖಾಸಗಿ ಮತ್ತು ಸರಕಾರಿ ಬಸ್ ಗಳ ಸಂಚಾರಕ್ಕೆ  ಏಕಾಏಕಿಯಾಗಿ ನಿರ್ಬಂಧಿಸಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಈ ಸಂಬಂಧ ಸಾಮಾಜಿಕ ಜಾಲತಾಣ ಸಹಿತ ಸಾರ್ವಜನಿಕರು ಎಎಸ್ಪಿಯವರ ಏಕಾಏಕಿ ನಿರ್ಧಾರದ ಬಗ್ಗೆ ಟೀಕೆ,ಆಕ್ಷೇಪ ವ್ಯಕ್ತವಾಗಿತ್ತು.ಈ ಹಿನ್ನೆಲೆಯಲ್ಲಿ ಗುರುವಾರ ಸಾರ್ವ ಜನಿಕರ, ಚಾಲಕರಿಂದಲೂ ವಿರೋಧ ವ್ಯಕ್ತವಾಗಿತ್ತು.  ಈ ನಡುವೆ ಎಎಸ್ಪಿ ಸೈದುಲ್ ಅಡಾವತ್ ರವರು ಸಂಚಾರ ನಿಷೇಧದ ಬಗ್ಗೆ ಸಮರ್ಥಿಸಿಕೊಂಡಿದ್ದರು. ಸಭೆಯ ಅಂತ್ಯಕ್ಕೆ ಪೊಲೀಸ್ ಅಧಿಕಾರಿಗಳು  ಸ್ಪಷ್ಟ ನಿಲುವು ಪ್ರಕಟಿಸಿರಲಿಲ್ಲ, ಆದರೆ ಶುಕ್ರವಾರ ಈ ಹಿಂದಿನಂತೆ ಸರಕಾರಿ, ಖಾಸಗಿ ಬಸ್ ಸಂಚಾರ ಆರಂಭಿಸಿದೆ.

 ಬಸ್ ನಿಲುಗಡೆ :  ಬಸ್ ನಿಲ್ದಾಣದಲ್ಲಿ ಸಾಕಷ್ಟು ಸಮಯ ನಿಂತು ಪ್ರಯಾಣಿಕರನ್ನು ಹತ್ತಿಸಿ ಗುರುಪುರ , ಕೈಕಂಬ, ಮಂಗಳೂರಿಗೆ ತೆರಳುವ ಖಾಸಗಿ ಬಸ್ ಗಳು ಮತ್ತೆ ಸರ್ವಿಸ್ ರಸ್ತೆಯಲ್ಲಿ 5ರಿಂದ10 ನಿಮಿಷಗಳ ಕಾಲ ನಿಂತು ಪ್ರಯಾಣಿಕರನ್ನು ಹತ್ತಿಸುವ ಚಾಳಿಗೆ ಮಾತ್ರ ಇಷ್ಟದರೂ ಬ್ರೇಕ್ ಬಿದ್ದಿಲ್ಲ, ಸಂಜೆಯ ವೇಳೆ ಗುರುಪುರ ಕಡೆಗೆ ತೆರಳುವ ಖಾಸಗಿ ಬಸ್ಸೊಂದು ಸರ್ವಿಸ್ ರಸ್ತೆಯಲ್ಲಿ ನಿಂತಿದ್ದ ಸುಮಾರು 10 ನಿಮಿಷಗಳ ನಿಂತಿದ್ದನ್ನು ಗಮನಿಸಿದ ಸ್ಥಳದಲ್ಲಿದ್ದ ಟ್ರಾಫಿಕ್ ಸಿಬಂದಿ ತೆರವಿಗೆ ಸೂಚನೆ ನೀಡಿದ ವೇಳೆ ಬಸ್ ನಿರ್ವಾಹಕ ಕಾನ್ಸ್ ಟೇಬಲ್ ಜೊತೆ ವಾಗ್ವದಕ್ಕು ನಿಂತ ಪ್ರಸಂಗವು ನಡೆಯಿತು.ಈ ರೀತಿ ನಿಯಮ ಉಲ್ಲಂಘಿಸುವ ಬಸ್ ಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳವಂತೆ ಆಗ್ರಹಗಳು ಕೇಳಿಬಂದಿದೆ. ಸವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ರಿಕ್ಷಾ ನಿಲುಗಡೆಗೊಳಿಸದಂತೆ ಮೇಲ್ಸತುವೆಯಡಿ ಭಾಗದಲ್ಲಿ ತಡೆ ಬೇಲಿಯ ಒಳಗಡೆ ಸರತಿಯಲ್ಲಿ ನಿಲುಗಡೆಗೊಳಿಸುವಂತೆ ರಿಕ್ಷಾ ಚಾಲಕರಿಗೆ ಬಂಟ್ವಾಳ ಟ್ರಾಫಿಕ್ ಎಸ್ ಐ ಅವರು ಸೂಚನೆ ನೀಡಿದ್ದಾರೆ.ಆದೇ ರೀತಿ ಮಂಗಳೂರು ಕಡೆಯಿಂದ ಬರುವ ಬಸ್ ಗಳು ಹೆದ್ದಾರಿಯನ್ನು ಬಿಟ್ಟು    ಬಸ್ ನಿಲ್ದಾಣದೊಳಗೆ ಪ್ರಯಾಣಿಕರನ್ನು ಹತ್ತಿಸಿ, ಇಳಿಸುವಂತೆಯು ಏಜೆಂಟರಿಗೆ ನಿರ್ದೇಶಿಸಿದ್ದಾರೆ. ಒಟ್ಟಾರೆಯಾಗಿ ಕಳೆದ ನಾಲ್ಕು ದಿನಗಳಿಂದ ಸರ್ವಿಸ್ ರಸ್ತೆಯಲ್ಲಿ ಸರಕಾರಿ, ಖಾಸಗಿ ಬಸ್ ಗಳಿಗೆ ಸಂಚಾರ ನಿರ್ಬಂಧಿಸಿ ಗೊಂದಲಕ್ಕೊಳಗಾಗಿದ್ದ ಸಾರ್ವಜನಿಕರು ಶುಕ್ರವಾರದಿಂದ ನಿಟ್ಟುಸಿರುಬಿಟ್ಟಿದ್ದಾರೆ.    (  ಗುರುಪುರ ಕಡೆಗೆ ತೆರಳುವ ಬಸ್ ಸರ್ವಿಸ್ ರಸ್ತೆಯಲ್ಲಿ ಠಿಕಾಣಿ ಹೂಡಿರುವುದು)

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here