ಬಂಟ್ವಾಳ: ದೇಶಕ್ಕೋಸ್ಕರ ಈ ದೇಶದಲ್ಲಿ ನ ಭ್ರಷ್ಟಾಚಾರ ನಿರ್ಮೂಲನೆ ಗಾಗಿ, ಗೋಹತ್ಯೆ ನಿಷೇಧದ ಉದ್ದೇಶದಿಂದ, ಗೋದಾವರಿ ಕಾವೇರಿ ನದಿ ಜೋಡಣೆ ಗಾಗಿ ಸೈಕಲ್ ಮೂಲಕ ಸಂಚಾರ ಮಾಡಿ ಎರಡನೇ ಬಾರಿ ಲೋಕಸಭಾ ಚುನವಣಾ ಸಂದರ್ಭದಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ ಎಂದು ಜಾಗ್ರತಿ ಮೂಡಿಸುವ ಸಲುವಾಗಿ ಶಿವಮೊಗ್ಗದಿಂದ ಬೆಂಗಳೂರು ಹೊರಟಿದ್ದಾರೆ.
ರಾಷ್ಟ್ರ ದ್ವಜ, ಕಡ್ಡಾಯ ಮತದಾನ ಮಾಡುವ ಸ್ಲೋಗನ್, ಕಣ್ಣಿಗೆ ಕನ್ನಡಕ, ಸ್ವಚ್ಛತೆ ಯ ಅರಿವು ಮೂಡಿಸುವ ಬರಹ ಜೊತೆ 73 ರ ಹರೆಯದ ವ್ಯಕ್ತಿ ಧಣಿವಿಲ್ಲದೆ ಸೈಕಲ್ ತುಳಿದು ಸೈಕಲ್ ನಲ್ಲಿ ಜಾಗ್ರತಿ ಜಾಥ.‌

ಇವರು ಉಮಾಪತಿ ಮೊದಲಿಯಾರ್, ಹಾಸನ‌ ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಲೆಕಲ್ಲು ತಿರುಪತಿ ಎಂಬುದು ಇವರ ಊರು.
ಸ್ವಾತಂತ್ರ್ಯ ಹೋರಾಟಗಾರ ಅಪ್ಪಾಸ್ವಾಮಿ ಇವರ ತಂದೆ. ಹುಟ್ಟು ಹೋರಾಟಗಾರನ ಮಗನಿಗೂ ಬಂದಿದೆ ಹೋರಾಟದ ರಕ್ತ.
ದೇಶಕ್ಕೇನಾದರೂ ನೀನು ಕೊಡಬೇಕು ಮಗ ಎಂದು ಹೇಳಿದ್ದ ಕ್ಕೆ ಉಮಾಪತಿ ಅವರು ಸಮಾಜ ಸೇವೆ ಮಾಡುವ ಪಣ ತೊಟ್ಟು ಅದರ ಜೊತೆಗೆ, ಹೆಚ್.ಐ.ವಿ. ಹಚ್.1 ,ಎನ್.1 ಮಧ್ಯಪಾನ ನಿಷೇದ, ಸ್ವಚ್ಚತೆ, ದೂಮಪಾನ ನಿಷೇಧ ಹೀಗೆ ಹಲವು ವಿಷಯಗಳ ಬಗ್ಗೆ ಜಾಗ್ರತಿ ಮೂಡಿಸುವ ಸಲುವಾಗಿ 2001 ರ ಅಕ್ಟೋಬರ್ 2 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಜಾಥಕ್ಕೆ ಅಧಿಕೃತ ಚಾಲನೆ ನೀಡಿದರು.
ಅವರು ಮೈಸೂರಿನ ಚಾಮುಂಡಿ ಬೆಟ್ಟದಿಂದ ಜಾಥವನ್ನು ಆರಂಭಿಸಿದ್ದರು.
ಅನೇಕ‌ ವಿಚಾರಗಳ ವಿಷಯ ಮಂಡನೆಗಾಗಿ ಸೈಕಲ್ ಜಾಥಾದ ಮೂಲಕ ದೆಹಲಿಗೆ ತೆರಳಿ ಪ್ರಧಾನಿ ಭೇಟಿ ಮಾಡಿದ್ದರು.

 

ಗೋದಾವರಿ ಕಾವೇರಿ ನದಿ ಜೋಡಣೆ ಯ ವಿಚಾರವಾಗಿ ಪ್ರಧಾನಿ ಬೇಟಿ ಮಾಡಿ ಮನವಿ ಮಾಡಿದ್ದರು.
2010 ರಲ್ಲಿ ಗೋಹತ್ಯೆ ನಿರ್ಮೂಲನೆ ದ ಬಗ್ಗೆ ಪ್ರಧಾನಿ ಮಂತ್ರಿಗೆ ಮನವಿ ಮಾಡಿದ್ದಲ್ಲದೆ ಸಾಕಷ್ಟು ಹೋರಾಟ ಮಾಡಿದ್ದಾರೆ.
ಈವರೆಗೆ ಸೈಕಲ್ ಮೂಲಕ 11 ಹೊರರಾಜ್ಯ, ಕರ್ನಾಟಕದ 27 ಜಿಲ್ಲೆ ಗೆ ಪ್ರವಾಸ ಮಾಡಿದ್ದಾರೆ. ಸುಮಾರು 56050ಶಾಲೆಯನ್ನು ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಅನೇಕ ವಿಚಾರಗಳ ಜಾಗ್ರತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಇವರು ರಾಷ್ಟ್ರೀಯ ಕ್ರೀಡಾ ಪಟು: 2008 ರಿಂದ 2016 ವರೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ 16 ಚಿನ್ನ, 8 ಬೆಳ್ಳಿ, 8 ಕಂಚಿನ ಪದಕ ಗಳನ್ನು ಪಡೆದಿದ್ದಾರೆ.

ಇವರು 2014 ರ ಲೋಕಸಭಾ ಚುನಾವಣಾ ಸಂಧರ್ಭದಲ್ಲಿ ಹಾಸನ ಜಿಲ್ಲೆಯ ಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಸೈಕಲ್ ಜಾಥವನ್ನು ಕೈಗೊಂಡು ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನೂರು ಶೇ ಕಡ್ಡಾಯ ಮತದಾನ ವಾಗಬೇಕು ಎಂಬ ಸದುದ್ದೇಶದಿಂದ ಸೈಕಲ್ ಮೂಲಕ ಶಿವಮೊಗ್ಗದಿಂದ ಪರ್ಯಟನೆ ಶುರು ಮಾಡಿದ್ದಾರೆ.
ಶಿವಮೊಗ್ಗದಿಂದ ಹೊರಟ ಇವರು ಅಲ್ಲಿಂದ ದ.ಕ.ಜಿಲ್ಲೆಯ ಮೂಲಕ ಹಾಸನ, ತುಮಕೂರು ಅಗಿ ಕೊನೆಯದಾಗಿ ಬೆಂಗಳೂರಿಗೆ ತೆರಳಿ ಬಳಿಕ ಅಲ್ಲಿ ಚುನಾವಣಾ ಧಿಕಾರಿಗಳನ್ನು ಬೇಟಿ ಮಾಡಿ ಕೆಲವೊಂದು ವಿಚಾರಗಳ ಬಗ್ಗೆ ವಿಮರ್ಶೆ ಮಾಡಲು ಅವಕಾಶ ನೀಡಲು ಮನವಿ ಮಾಡುತ್ತೇನೆ. ಆ ಸಂದರ್ಭದಲ್ಲಿ ಅವಕಾಶ ಸಿಕ್ಕಿದರೆ ದೇಶದಲ್ಲಿ ರುವ ಸಾವಿರಾರು ಕೈದಿಗಳಿಗೂ ಮತದಾನದ ಹಕ್ಕು ಸಿಗುವಂತೆ ಮುಂದಿನ ದಿನಗಳಲ್ಲಿ ಅವಕಾಶ ಮಾಡಲು ಮನವಿ ಮಾಡುತ್ತೇನೆ ಅಮೂಲಕ ಪರಿವರ್ತನೆ ಗೆ ದಾರಿಯಾಗುತ್ತದೆ ಅದಲ್ಲದೇ ಆಸ್ಪತ್ರೆ ಯಲ್ಲಿರುವ ರೋಗಿಗಳಿಗೂ ಮತದಾನದ ಅವಕಾಶ ಜಿಲ್ಲಾಡಳಿತ ಮಾಡುವಂತೆ ಕೇಳಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಆದರ್ಶ ವ್ಯಕ್ತಿ, ಪರೋಪಕಾರಿ ಉಮಾಪತಿ ಅವರದು ಬಡ ಕುಟುಂಬ . ಇವರಿಗೆ ಸ್ವಂತ ಸೂರು ಇಲ್ಲ, ಬಾಡಿಗೆ ಮನೆಯಲ್ಲಿ ಇವರ ವಾಸ , ಬುದ್ಧಿಮಾಂದ್ಯತೆಯೊಬ್ಬರಿಗೆ ಬಾಳು ನೀಡಿದ ವಿಶೇಷ ಗುಣುವುಳ್ಳ ತ್ಯಾಗಮನೋಭಾವನೆಯ ವ್ಯಕ್ತಿ ಇವರು.
ಬಳಿಕ ಹೆಣ್ಣು ಮಗುವೊಂದನ್ನು ದತ್ತು ಪಡೆದು ಅವಳಿಗೆ ಮದುವೆ ಮಾಡಿದ ಪುಣ್ಯ ಜೀವಿ ಇವರು.
ಇವರು ವ್ರತ್ತಿ ಯಲ್ಲಿ ಇಲೆಕ್ಟ್ರ್ ಸಿಯಾನ್ ಗುತ್ತಿಗೆದಾರ.
ಇವರು ಕೆಲಸ ಮಾಡುವುದು ಬರಿ ಒಂಬತ್ತು ತಿಂಗಳು ಮೂರು ಇಂತಹ ಉತ್ತಮ ವಿಚಾರಗಳಿಗೆ ಸಂಬಂಧಿಸಿದಂತೆ ಸೈಕಲ್ ಜಾಥ ಮಾಡಿ ಜಾಗ್ರತಿ ಮೂಡಿಸುವ ಕೆಲಸ.
ಇತ್ತೀಚಿನ ದಿನಗಳಲ್ಲಿ ಇವರಿಗೆ ದ್ರಷ್ಟಿ ಯ ಸಮಸ್ಯೆ ಉಂಟಾಗಿದೆ ಹಾಗಾಗಿ ಕೆಲಸ ಮಾಡಲು ತೊಂದರೆ ಯಾಗುತ್ತಿದೆ, ಆದರೂ ಜಾಗ್ರತಿಗಾಗಿ ಸೈಕಲ್ ಜಾಥವನ್ನು ಮುಂದುವರಿಸಿದ ಇವರು ಬೇರೆ ಬೇರೆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಕಾಲದಲ್ಲಿ 100 ಆದರ್ಶ ವ್ಯಕ್ತಿಯಾಗಿ ಬದುಕುವ ಚಾಲೆಂಜ್ ಮಾಡುತ್ತಾರೆ.

ಭಾಷೆಯ ತೊಂದರೆ: ಕರ್ನಾಟಕದಲ್ಲಿ ಕನ್ನಡ ಕಲಿಯವುದು ಮೊದಲ ಆದ್ಯತೆ, ಜೊತೆಗೆ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳನ್ನು ಪ್ರಥಮ ಅದ್ಯತೆಯಲ್ಲಿ ಶಿಕ್ಷಣ ನೀಡುವ ಕೆಲಸ ಆಗಬೇಕಾಗಿದೆ.
ಇವರಿಗೆ ಭಾಷೆಯ ಸಮಸ್ಯೆ ಯಿಂದಾಗಿ ದೆಹಲಿಯಲ್ಲಿ ಪ್ತಧಾನಿಯ ಜೊತೆಯಲ್ಲಿ ಮಾತನಾಡುವದ್ದಕ್ಕೆ ಸಾಕಷ್ಟು ತೊಂದರೆ ಯಾಗಿದೆ.
ಹಾಗಾಗಿ ನಮ್ಮ ಮಕ್ಕಳಿಗೆ ಎಲ್ಲಾ ಭಾಷೆಗಳ ಪರಿಚಯ ಮಾಡಿಕೊಡುವ ಅವಶ್ಯಕತೆ ಇದೆ ಎಂದು ಅವರು ಹೇಳುತ್ತಾರೆ.

ಇವರಿಗೆ 2006 ರಲ್ಲಿ ಹಾಸನದ ಜಿಲ್ಲಾಧಿಕಾರಿ ಅಶ್ವಥ್ ನಾರಾಯಣ ಅವರು ಮೊಬೈಲ್ ಉಚಿತವಾಗಿ ನೀಡಿದ್ದರು, ಆದರೆ ಈಗ ಅದು ಕೆಟ್ಟು ಹೋಗಿದ್ದು ಇವರಿಗೆ ಪೋನ್ ಒಂದರ ಅವಶ್ಯಕತೆ ಇದೆ, ಸರಕಾರ ನೀಡಿದರೆ ಉತ್ತಮ, ದಾನಿಗಳು ಯಾರಾದರೂ ಕೊಟ್ಟರು ಪಡೆದುಕೊಳ್ಳುತ್ತಾರೆ.
2011 ರಲ್ಲಿ ಡೆಲ್ಲಿ ಕನ್ನಡ ಸಂಘದವರು ಇವರ ಈ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಿದ್ದಲ್ಲದೆ, ವಿಡಿಯೋ ಕ್ಯಾಮಾರವನ್ನು ಉಚಿತವಾಗಿ ನೀಡಿದ್ದಾರೆ.

ಹಣಕ್ಕಾಗಿ ಮತವನ್ನು ಮಾರಿದರೆ ಹೆತ್ತ ತಾಯಿಯನ್ನು ಮಾರದಂತೆ ಎನ್ನುತ್ತಾರೆ. ನೂರು ಶೇ ಮತದಾನ ನಡೆಯಬೇಕು ಎಂದು ಧರ್ಮಸ್ಥಳ ಕ್ಕೆ ಹರಕೆ ಹೊತ್ತುಕೊಂಡಿದ್ದೇನೆ ಜೊತೆಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಭಕ್ತ, ವೀರೇಂದ್ರ ಹೆಗ್ಗಡೆ ಯವರು ನನಗೆ ಆರ್ಥಿಕ ಸಹಾಯ ನೀಡಿದ್ದಾರೆ.
ಇವರ ಜೊತೆ ಸಮಾಜ ಸೇವೆಗೆ ಸಂಬಂಧಿಸಿದ ಸುಮಾರು 28 ಕೆ.ಜಿ.ಯಷ್ಟು ದಾಖಲೆ ಗಳು ಹಾಗೂ 10 ಕೆ.ಜಿ.ಛಾಯಾಚಿತ್ರ ಗಳು ಇವೆ.
ಮತದಾನ ಪ್ರತಿಯೊಬ್ಬರ ಹಕ್ಕು ಕಡ್ಡಾಯವಾಗಿ ಮತದಾನ ಮಾಡುವಂತೆ ಇವರ ವಿನಂತಿ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here