ಬಂಟ್ವಾಳ: ಕೂಲಿ ಕಾರ್ಮಿಕ ನೋರ್ವನ ಮನೆಗೆ ಕಾರು ಮತ್ತು ರಿಕ್ಷಾದೊಂದಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪುಂಜಾಲಕಟ್ಟೆ ಮೂರ್ಜೆ ನಿವಾಸಿ ಸತೀಶ್ ನಾಯ್ಕ ಹಲ್ಲೆಗೊಳಗಾಗಿ ಪುಂಜಾಲಕಟ್ಟೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರವೀಣ್ ಮತ್ತು ಅವರ ಸಂಗಡಿಗರು ಸೇರಿ ಸತೀಶ್ ನಾಯ್ಕ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಪ್ರವೀಣ್ ಮತ್ತು ಸತೀಶ್ ನಾಯ್ಕ ಅವರು ಆತ್ಮೀಯ ಸ್ನೇಹಿತರಾಗಿದ್ದರು ಇತ್ತೀಚಿಗೆ ಯಾವುದೋ ಕಾರಣಕ್ಕೆ ಇವರ ನಡುವೆ ವೈ ಮನಸ್ಸು ಉಂಟಾಗಿದೆ ಎನ್ನಲಾಗಿದೆ.
ಸತೀಶ್ ಅವರು ಪ್ರವೀಣ್ ಅವರ ವೈಯಕ್ತಿಕ ವಿಚಾರಗಳನ್ನು ಹೊರಗಡೆ ಹೇಳಿಕೊಂಡು ಬರುತ್ತಿದ್ದರು ಎಂದು ಆರೋಪದಲ್ಲಿ ಕುಪಿತರಾದ ಪ್ರವೀಣ್ ಸತೀಶ್ ನಾಯ್ಕ ಅವರ ಮನೆಗೆ ಬಂದು ಹೊರಗಡೆ ಕರೆದು ಹಲ್ಲೆ ನಡೆಸಿದ್ದಾರೆ , ಜೊತೆಗೆ ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಾತಿ ನಿಂದನೆ ಕೂಡ ಮಾಡಲಾಗಿದೆ ಎಂದು ಅವರು ಆರೋಪ ವ್ಯಕ್ತಪಡಿಸಿದ್ದಾರೆ.
ಆದರೆ ಈ ಬಗ್ಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ದೂರು ನೀಡಿದಾಗ ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ನಡೆಸದೆ ಕೈಕಟ್ಟಿಕುಳಿತುಕೊಂಡಿದ್ದಾರೆ , ಆರೋಪಿಯ ಬಂಧನ ವಾಗಲಿ ಅಥವಾ ತನಿಖೆ ನಡೆಸದೆ ಇರಲು ಕಾರಣವೇನು, ಈ ಬಗ್ಗೆ ಸೂಕ್ತ ತನಿಖೆಯಾಗಿ ನಿರಪರಾಧಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶಂಕರ್ ಶೆಟ್ಟಿ ತಿಳಿಸಿದ್ದಾರೆ.
ಸತೀಶ್ ಅವರಿಗೆ ನ್ಯಾಯ ಸಿಗಬೇಕು ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿ ಬಂಟ್ವಾಳ ಡಿವೈಎಸ್ ಪಿ ಗೆ ದೂರು ನೀಡುತ್ತೇವೆ ಎಂದು ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಸುಂದರ ನಾಯ್ಕ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here