ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಇರಾ ಗ್ರಾಮದ ಮೂಳೂರು ಮುಖ್ಯ ರಸ್ತೆಯ ಬಳಿ ಸರ್ವೆ ನಂ 286/1 ರಲ್ಲಿ 1.68 ಎಕರೆ ಸರ್ಕಾರಿ ಜಮೀನನ್ನು ಗ್ರಾಮದ ಒಳಗಿನ ಹಾಗೂ ಹೊರಗಿನ ಕೆಲವು ಖಾಸಗಿ ವ್ಯಕ್ತಿಗಳು ಸಮತಟ್ಟು ಮಾಡಿ ಮಾರಾಟ ಮಾಡಲು ಯತ್ನಿಸುತ್ತಿರುವಾಗ  ಸಾರ್ವಜನಿಕರ ದೂರಿನ ಮೇರೆಗೆ ಕಂದಾಯ ಇಲಾಖೆಯವರು ಬಂದು ಸ್ಥಳ ಪರಿಶೀಲನೆ ನಡೆಸಿ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದ ಬಗ್ಗೆ ವರದಿಯಾಗಿದೆ. ಬಂಟ್ವಾಳ ತಹಶೀಲ್ದಾರ್ ಹಾಗೂ ಗ್ರಾಮ ಕರನಣಿಕರು ಈಗಾಗಲೆ ಸರ್ಕಾರಿ ಜಮೀನಿಗೆ ಪ್ರಕಟಣೆಯ ನಾಮಫಲಕವನ್ನು ಅಳವಡಿಸಿದ್ದು ಕಾನೂನು ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here