Tuesday, September 26, 2023

ಮತದಾನ ಮಾಡಿ ಸದೃಡ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಬೇಕು: ಡಾ| ಪಾಂಡುರಂಗ ನಾಯಕ್

Must read

ಬಂಟ್ವಾಳ: ಅರ್ಹ ವಿದ್ಯಾರ್ಥಿಗಳು ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬೆಳೆಸಬೇಕು ಮತ್ತು ಸದೃಡ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಕೊಳ್ಳಬೇಕು ಎಂದು ಎಸ್.ವಿ.ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ನುಡಿದರು. ಅವರು ಮಾ.7 ರಂದು ಶ್ರೀ ವೆಂಕಟರಮಣ ಸ್ವಾವಿ ಕಾಲೇಜು ಬಂಟ್ವಾಳ ಇಲ್ಲಿ ಚುನಾವಣಾ ಸಾಕ್ಷರತಾ ಸಂಘ ಮತ್ತು ಜಿಲ್ಲಾಡಳಿತ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಚುನಾವಣಾ EVM & VV PAT ಬಗ್ಗೆ ಪ್ರಾಯೋಗಿಕ ತರಬೇತಿ ಕಾರ್‍ಯಾಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಅಧ್ಯಕ್ಷರಾದ ಪ್ರೊ.ನಾರಾಯಣ ಭಂಡಾರಿಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ ಮಾಸ್ಟರ್ ಟ್ರೈನರ್ ಶ್ರೀಯುತ ಮೋಹನ್ ತರಬೇತಿಯನ್ನು ನೀಡಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ರೂಪಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸುಮಾರು 200ಕ್ಕೂ ಹೆಚ್ಚು ಪ್ರಥಮ ಪದವಿಯ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದರು.

More articles

Latest article