Tuesday, October 31, 2023

ಉಚಿತ ಸುಧಾರಿತ ಉಪಕರಣ ವಿತರಣೆ

Must read

ಬಂಟ್ವಾಳ: ಜಿ.ಪಂ.ಅನುದಾನದಲ್ಲಿ  ವ್ರತ್ತಿಪರ  ಕುಶಲಕರ್ಮಿಗಳಿಗೆ  ಉಚಿತ ಸುಧಾರಿತ ಉಪಕರಣ ವಿತರಣೆ ಕಾರ್ಯಕ್ರಮ ತಾಲೂಕು ಪಂಚಾಯತ್ ಸಾಮಾರ್ಥ್ಯ ಸೌಧದಲ್ಲಿ ಬುಧವಾರ ನಡೆಯಿತು.
ಬಂಟ್ವಾಳ ತಾಲೂಕಿನ 42 ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಅಟೋಮೋಬೈಲ್ , ಎಲೆಕ್ಟ್ರಿಕಲ್, ಗಾರೆ ಕೆಲಸ, ಬ್ಲಾಕ್ ಸ್ಮಿತಿ, ಕಾರ್ಪೆಂಟ್ ಗಳಿಗೆ ಜಿ.ಪಂ.ಸದಸ್ಯರ ಉಪಸ್ಥಿತಿಯಲ್ಲಿ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರಾದ ಎಂ.ತುಂಗಪ್ಪ ಬಂಗೇರ, ಎಂ.ಎಸ್.ಮಹಮ್ಮದ್, ರವೀಂದ್ರ ಕಂಬಳಿ, ಮಂಜುಳಾ ಮಾಧವೆ ಮಾವೆ, ಮಮತಾ ಗಟ್ಟಿ, ಜಯಶ್ರೀ ಕೊಡಂದೂರು, ಕಮಲಾಕ್ಷೀ ಕೆ.ಪೂಜಾರಿ, ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ , ಖಾದಿ ಮತ್ತು ಗ್ರಾಮೋದ್ಯೋಗ ಇದರ ಉಪನಿರ್ದೇಶಕ ಮಂಜುನಾಥ್ ಹೆಗ್ಡೆ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

More articles

Latest article