Sunday, October 22, 2023

ಉಳ್ಳಾಲ ತಾ.ಗೆ ಸಜೀಪನಡು ಗ್ರಾಮ ಸೇರ್ಪಡೆಗೆ ವಿರೋಧ

Must read

ಬಂಟ್ವಾಳ: ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಉಳ್ಳಾಲ ತಾಲೂಕಿಗೆ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟಿರುವ ಸಜೀಪನಡು ಗ್ರಾಮವನ್ನು  ಸೇರಿಸಿಕೊಳ್ಳುವುದಕ್ಕೆ  ಗ್ರಾಮಸ್ಥರಿಂದ  ವಿರೋಧ ವ್ಯಕ್ತವಾಗಿದೆ. ಬುಧವಾರ ಸಜೀಪನಡು ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷ ನಾಸೀರ್ ಮಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ಹಿರಿಯರು,ವಿವಿಧ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪಂಚಾಯತ್ ಸದಸ್ಯರ ಸಭೆಯಲ್ಲಿ ಸಜೀಪನಡು ಗ್ರಾಮವನ್ನು ಉಳ್ಳಾಲ ತಾಲೂಕಿಗೆ ಸೇರ್ಪಡೆಗೊಳಿಸುವುದಕ್ಕೆ  ಆಕ್ಷೇಪ ವ್ಯಕ್ತವಾಯಿತು.

 

ಧಾರ್ಮಿಕ, ಶೈಕ್ಷಣಿಕ,ವ್ಯವಹಾರಿಕವಾಗಿ ಸಜೀಪನಡು ಗ್ರಾಮಸ್ಥರು ಬಂಟ್ವಾಳ ತಾಲೂಕೇ ಅನುಕೂಲಕರವಾಗಿದ್ದು , ಯಾವುದೇ ಕಾರಣಕ್ಕೂ ಈ ಗ್ರಾಮವನ್ನು ಉಳ್ಳಾಲ ತಾಲೂಕಿಗೆ ಸೇರ್ಪಡೆಗೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸರ್ವಾನುಮತದ ನಿರ್ಣಯವನ್ನು ಸಭೆಕೈಗೊಳ್ಳಲಾಯಿತು. ಈ ಸಂಬಂಧ ಮುಂದಿನ ಹಂತದಲ್ಲಿ  ಪಕ್ಷ , ಬೇಧ ಮರತು   ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತಲ್ಲದೆ 10 ಮಂದಿಯ ಸಮಿತಿಯೊಂದನ್ನು ರಚಿಸಲಾಯಿತು. ಹಾಗೆಯೇ ಗ್ರಾ.ಪಂ.ನ ಮುಂದಿನ ಸಾಮಾನ್ಯ‌ಸಭೆಯಲ್ಲೂ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ,ಜಿಲ್ಲಾ ಉಸ್ತುವಾರಿ ಸಚಿವರು,ಸರಕಾರದ ಮುಖ್ಯಕಾರ್ಯದರ್ಶಿಯವರ ಗಮನಕ್ಕೆ ತರಲಾಗುವುದು ಎಂದು ಸಜೀಪನಡು ಗ್ರಾಪಂ ಅಧ್ಯಕ್ಷ ಮಹಮ್ಮದ್‌ನಾಸೀರ್ ಸಭೆಗೆ‌ ತಿಳಿಸಿದರು.  ಷಣ್ಮಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮುಳಿಂಜ ವೆಂಕಟೇಶ್ ಭಟ್, ಸಜೀಪನಡು ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಜಾಕ್,ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಜೆಡಿಎಸ್ ಮುಖಂಡ ಮಹಮ್ಮದ್ ಶಾಫಿ, ನಿವೃತ್ತ ಮುಖ್ಯೋಪಾಧ್ಯಾಯ ಆನಂದ ರೈ,ಗ್ರಾಪಂನ ಮಾಜಿ ಅಧ್ಯಕ್ಷ ಎಸ್.ಕೆ.ಮಹಮ್ಮದ್, ನವಾಜ್ ಅವರು ಸಭೆಯಲ್ಲಿ ಮಾತನಾಡಿದರು.     ಗ್ರಾ.ಪಂ.ಉಪಾಧ್ಯಕ್ಷೆ ಸುನೀತಾ ಶಾಂತಿ ಮೋರಸ್, ಪ್ರಮುಖರಾದ ಹರೀಶ್ ಬಂಗೇರ, ಅಲ್ತಾಫ್, ಅಬ್ದುಲ್ ರಹಿಮಾನ್, ಸಂಜೀವ ಬಂಗೇರ, ಅಬ್ದುಲ್ ರಹಿಮಾನ್ ಸಜೀಪ, ಹಾಜಬ್ಬ, ಅಬ್ದುಲ್ ಸತ್ತಾರ್, ಅಕ್ಬರ್, ಸುರೇಶ್, ಜೆರಿಮೊರಸ್ ಮೊದಲಾದವರಿದ್ದರು.

More articles

Latest article