ಇಡ್ಕಿದು: ಇಡ್ಕಿದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತೂರು ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ವಾರ್ಷಿಕ ಸಮ್ಮಿಲನ ಮತ್ತು ವಿದಾಯೋತ್ಸವ ಕಾರ್‍ಯಕ್ರಮ ನಡೆಯಿತು. ಇಡ್ಕಿದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟ್ವಾಳ ಶಿಕ್ಷಣ ಇಲಾಖೆಯ ಬಿ.ಆರ್.ಪಿ ಯವರಾದ ನಾರಾಯಣ ಗೌಡರವರು ಶಿಕ್ಷಣ ಕ್ಷೇತ್ರದಲ್ಲಿ ಪ್ರಥಮ ಮೆಟ್ಟಿಲಾದ ಅಂಗನವಾಡಿ ಕೇಂದ್ರವು ಮಗುವಿನ ಭವಿಷ್ಯವನ್ನು ರೂಪಿಸುವ ಆಶಾಕಿರಣವಾಗಿದೆ. ಪುಟಾಣಿ ಮಕ್ಕಳನ್ನು ಬೆಳಿಗ್ಗಿನಿಂದ ಸಂಜೆಯವರೆಗೆ ಹಾರೈಸುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯವರ ಸೇವೆ ಶ್ಲಾಘನೀಯ ಎಂದರು. ಕನ್ನಡ ಮಾಧ್ಯಮದಲ್ಲಿ ಕಲಿತಿರುವಂತಹ ಬಹಳಷ್ಟು ವ್ಯಕ್ತಿಗಳು ಇಂದಿನ ಪ್ರಜಾ ಪ್ರಭುತ್ವದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಗಮನಾರ್ಹ ಅಂಶವಾಗಿದೆ.
ಕಾರ್‍ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಮಿತ್ತೂರು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಆದಂ ಎಂ.ಎಂ.ಎಸ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಗೋಕುಲ್‌ದಾಸ್ ಭಕ್ತ, ಮಿತ್ತೂರು ಶಾಲೆಯ ಮುಖ್ಯೋಪಾಧ್ಯಾರಾದ ಮೋಹನ್ ಪಿ ಎಂ, ಮಾಜಿ ಜಲಾನಯನ ಸಿಬ್ಬಂದಿ ನಬಾರ್ಡ್ ಸದಾಶಿವ ಎಸ್ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಮುಂದಿನ ವರ್ಷ 1ನೇ ತರಗತಿಗೆ ಸೇರುವ 10 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು ಮತ್ತು ಮಕ್ಕಳಿಗೆ ಪೋಷಕರಿಗೆ ಸ್ತ್ರೀಶಕ್ತಿ ಗುಂಪಿನವರಿಗೆ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪುಟಾಣಿ ಮಕ್ಕಳ ಮತ್ತು ಹಳೇ ವಿದ್ಯಾರ್ಥಿಗಳ ಸಾಂಸ್ಕ್ರತಿಕ ಕಾರ್‍ಯಕ್ರಮದ ನಂತರ ಹಳೆ ವಿದ್ಯಾಥಿಗಳು ಮತ್ತು ಪೋಷಕರ ಸಹಕಾರದೊಂದಿಗೆ ಪುತ್ತೂರು ಬೊಳ್ಳಿ ಬೊಲ್ಪು ಕಲಾವಿದರು ಇವರಿಂದ ಕಾಸ್‌ದ ಕಸರತ್ತ್ – ಕುಸಲತ್ತ್ ತುಳು ನಾಟಕ ಜರುಗಿತು. ಇಡ್ಕಿದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂ. ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು ಕಾರ್‍ಯಕ್ರಮ ನಿರೂಪಿಸಿದರು. ಬಾಲವಿಕಾಸ ಸಮಿತಿಯ ಹಿರಿಯ ನಾಗರಿಕರಾದ ಶೀಲಾವತಿ ಶೆಟ್ಟಿ ಸ್ವಾಗತಿಸಿದರು. ಅಂಗನವಾಡಿ ಕಾರ್‍ಯಕರ್ತೆ ಭವಾನಿ ಮಿತ್ತೂರು ವರದಿ ವಾಚಿಸಿದರು. ಸಮಿತಿಯ ಅಧ್ಯಕ್ಷರಾದ ಜಗದೀಶ್ವರಿ ವಂದಿಸಿದರು.


