Thursday, October 19, 2023

ಅಡ್ಯನಡ್ಕ: ಶ್ರೀ ಉಳ್ಳಾಲ್ತಿ ಭಜನಾ ಮಂದಿರ ವಾರ್ಷಿಕೋತ್ಸವ

Must read

ವಿಟ್ಲ: ಶ್ರೀ ಉಳ್ಳಾಲ್ತಿ ಭಜನಾ ಮಂದಿರ ಅಮೈ ಇದರ 47ನೇ ವಾರ್ಷಿಕೋತ್ಸವವು ಇತ್ತೀಚೆಗೆ ದೀಪ ಪ್ರತಿಷ್ಠೆ, ನಾನಾ ಭಜನಾ ಮಂಡಳಿಗಳಿಂದ ಭಜನೆ, ಗಣಪತಿ ಹವನ, ದುರ್ಗಾ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್‍ಮಿಕ ಸಭೆ ಮೊದಲಾದ ಕಾರ್‍ಯಕ್ರಮಗಳೊಂದಿಗೆ ನಡೆಯಿತು.
ಧಾರ್‍ಮಿಕ ಸಭೆಯ ಅಧ್ಯಕ್ಷತೆಯನ್ನು ಕಾಟುಕುಕ್ಕೆ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕರಾದ ಸಚ್ಚಿದಾನಂದ ಖಂಡೇರಿ ವಹಿಸಿದ್ದರು. ನಿವೃತ್ತ ಬಿ.ಎಸ್.ಎನ್.ಎಲ್. ಅಧಿಕಾರಿ ನಾರಾಯಣ ನಾಯ್ಕ ಎ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ಪ್ರಧಾನ ಕಾರ್‍ಯದರ್ಶಿ ಸದಾನಂದ ಶೆಟ್ಟಿ ಕುದ್ವ ಧಾರ್‍ಮಿಕ ಉಪನ್ಯಾಸ ನೀಡಿದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉದಯಶಂಕರ ಭಟ್ ಅಮೈ ಸ್ವಾಗತಿಸಿದರು. ಮಂಡಳಿಯ ಕಾರ್‍ಯದರ್ಶಿ ಪರಮೇಶ್ವರ ಕಾಯರ್ತಡ್ಕ ವರದಿ ವಾಚಿಸಿದರು. ಮಂದಿರದ ಅಧ್ಯಕ್ಷರಾದ ವೇಣುಗೋಪಾಲ ಅಮೈ ವಂದಿಸಿದರು. ಶಿವಪ್ಪ ನಾಯ್ಕ ಶಾಂತಿಮೂಲೆ ಕಾರ್‍ಯಕ್ರಮ ನಿರೂಪಿಸಿದರು. ಸಭಾ ಕಾರ್‍ಯಕ್ರಮದ ನಂತರ ಮಹಾ ಮಂಗಳಾರತಿ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಅಂಗನವಾಡಿ ಪುಟಾಣಿಗಳಿಂದ, ಹಾಗೂ ಮಕ್ಕಳಿಂದ ನಾನಾ ವಿನೋದಾವಳಿಗಳು ಜರಗಿದವು. ಶ್ರೀ ವೈಷ್ಣವಿ ನವರಾಜ್ ಭಟ್ ಅಮೈ ಮತ್ತು ಬಳಗದವರು ಸಂಗೀತ ಸಂಜೆ ಕಾರ್‍ಯಕ್ರಮ ನಡೆಸಿಕೊಟ್ಟರು.

More articles

Latest article