Wednesday, October 25, 2023

ಅಳಿಕೆ ಶ್ರೀಸತ್ಯಸಾಯಿ ಪ್ರೌಢಶಾಲೆಗೆ ವಂಡರ್‌ಲಾ ಪ್ರಶಸ್ತಿ

Must read

ವಿಟ್ಲ: ವಂಡರ್‌ಲಾ ಹಾಲಿಡೇಸ್ ಸಂಸ್ಥೆಯ ಪ್ರತಿಷ್ಠಿತ ಪರಿಸರ ಮತ್ತು ಇಂಧನ ಸಂರಕ್ಷಣೆ ಪ್ರಶಸ್ತಿಯನ್ನು ಕರ್ನಾಟಕ ಮತ್ತು ತಮಿಳುನಾಡಿನ ಶಾಲೆಗಳಿಗೆ ನೀಡಲಾಗಿದ್ದು, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ೨೫ ಸಾವಿರ ರೂ. ನಗದು ಬಹುಮಾನಕ್ಕೆ ಭಾಜನವಾಗಿದೆ.
ತಮಿಳುನಾಡು ಹೊಸೂರಿನ ಮಹರ್ಷಿ ವಿದ್ಯಾಮಂದಿರ ಪ್ರಥಮ ಬಹುಮಾನ ೫೦ ಸಾವಿರ ರೂ. ತೃತೀಯ ಸ್ಥಾನವನ್ನು ದಾವಣಗೆರೆಯ ಅನ್ಮೋಲ್ ಪಬ್ಲಿಕ್ ಸ್ಕೂಲ್ ಗದಗ ಜಿಲ್ಲೆ ಮತ್ತು ಗೋಜನೂರಿನ ಸರಕಾರಿ ಪ್ರೌಢಶಾಲೆ ಪಡೆದುಕೊಂಡಿದೆ.
ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ ವಂಡರ್‌ಲಾದ ಪ್ರತಿಷ್ಠಿತ ಪ್ರಶಸ್ತಿಯನ್ನು ನಾಲ್ಕನೇ ಬಾರಿ ಪಡೆದುಕೊಳ್ಳುತ್ತಿರುವುದು ಹೆಗ್ಗಳಿಕೆಯೆನಿಸಿದೆ. ಮುಖ್ಯ ಶಿಕ್ಷಕ ರಘು ಟಿ.ವೈ ಮತ್ತು ಶಿಕ್ಷಕರ, ಮಕ್ಕಳ ನಿರಂತರ ಪ್ರಯತ್ನ ಮತ್ತು ಆಡಳಿತ ಮಂಡಳಿಯ ಸಂಪೂರ್ಣ ಸಹಕರಿಸಿತ್ತು. 2018-19ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಮಿತ್ರ ಶಾಲೆ ಪ್ರಶಸ್ತಿಯನ್ನು ಪಡೆದು ಕೊಂಡಿತ್ತು.

More articles

Latest article