ವಿಟ್ಲ: ಪ್ರೀತಿ, ಭಕ್ತಿ, ಶ್ರದ್ಧೆಯಿಂದ ಮಾಡಿದ ಸತ್ಕರ್ಮ ಮನೆಯನ್ನು ಬೆಳಗುತ್ತದೆ. ಸನಾತನ ಹಿಂದೂ ಧರ್ಮ ಒಳ್ಳೆಯದನ್ನೇ ಬಯಸುವಂತದ್ದಾಗಿದೆ. ಹೃದಯ ತುಂಬಿ ಬರುವಂತಹ ಬ್ರಹ್ಮಕಲಶ ಇಲ್ಲಿ ನಡೆದಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ಫೆ.12 ರಂದು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಶಿಬರಿಕಲ್ಲಮಾಡ ಶ್ರೀ ಮಲರಾಯ – ಮೂವರ್ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ. ಭೀಮೇಶ್ವರ ಜೋಷಿ ಮಾತನಾಡಿ ದೇವಸ್ಥಾನಗಳ ಬ್ರಹ್ಮಕಲಶೋತ್ಸವದ ಮೂಲಕ ಧರ್ಮದ ಸಂರಕ್ಷಣೆ ಸಾಧ್ಯವಾಗಿದೆ. ಪ್ರತಿಯೊಬ್ಬನಲ್ಲೂ ಅಂತರಂಗದ ಶುದ್ಧೀಕರಣ ಆಗಬೇಕಾದ ಅವಶ್ಯಕತೆ ಇದೆ. ದೇವಾಲಯದಲ್ಲಿ ಮನ ಪರಿವರ್ತನೆ ಸಹಿತ ಹಲವು ರೀತಿಯ ಬದಲಾವಣೆ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಜೇನು ಸಾಕಾಣಿಕೆಯ ಪೂವಪ್ಪ ಪೂಜಾರಿ ಪಿಲಿಂಜ, ಮಾಜಿ ಸೈನಿಕ ಗೋಪಾಲಕೃಷ್ಣ ಭಟ್ ಕಾರ್ಯಾಡಿ, ಕರಾಟೆ ಪಟು ಅನನ್ಯ ನಾಟೆಕಲ್ಲು, ಭೂತಾರಾಧನೆ ಹೊನ್ನಪ್ಪ ನಲಿಕೆ, ಶಿಕ್ಷಣ ಕ್ಷೇತ್ರದ ನಾರಾಯಣ ಪೂಜಾರಿ ಎಸ್. ಕೆ. ಅವರನ್ನು ಸನ್ಮಾನಿಸಲಾಯಿತು. ಮೂಲ್ಕಿ ಸೀಮೆ ಅರಸರಾದ ಯಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೆ. ಟಿ. ವೆಂಕಟೇಶ್ವರ ಅವರನ್ನು ಗ್ರಾಮಸ್ಥರ ಪರವಾಗಿ ಗೌರವಿಸಲಾಯಿತು.
ಮುಂಬೈಯ ಉದ್ಯಮಿ ಲೋಕನಾಥ ಶೆಟ್ಟಿ ಮರುವಾಳ, ಮಂಗಳೂರು ಮಹಾನಗರಪಾಲಿಕೆಯ ಜಂಟಿ ಆಯುಕ್ತರಾದ ಗೋಕುಲ್ ದಾಸ್ ನಾಯಕ್, ಪುತ್ತೂರು ಮುಳಿಯ ಜುವೆಲ್ಲರ್ಸ್‌ನ ಮುಳಿಯ ಶ್ಯಾಮ್ ಭಟ್, ಮಂಗಳೂರು ಮರಾಠಿ ಸಮಾಜ ಸೇವಾಸಂಘದ ಸ್ಥಾಪಕಾಧ್ಯಕ್ಷರಾದ ಎಂ.ಎ ನಾಯಕ್, ಅಳಿಕೆ ನೆಕ್ಕಿತಪುಣಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ ಸೀತಾರಾಮ, ತುಳು ತುಡರ್ ಕೂಟ ಸುಳ್ಯ ಇದರ ಅಧ್ಯಕ್ಷರಾದ ಜೆ. ಕೆ. ರೈ, ಪ್ರದೀಪ್ ಬಡಕ್ಕಿಲ, ಜೆಡ್ಡು ಶ್ರೀ ಆದಿಧನ್ವಂತರಿ ಕ್ಷೇತ್ರದ ಧರ್ಮದರ್ಶಿ ಗಣಪತಿ ಭಟ್ ಜೆಡ್ಡು, ಮೈಸೂರಿನ ಎಸ್ ಎಲ್ ವಿ ಗ್ರೂಪ್ಸ್‌ನ ಮಾಲಕರಾದ ದಿವಾಕರ ದಾಸ್ ನೇರ್ಲಾಜೆ, ಯೋಗೀಶ್ ಕುಡ್ವ, ಕೆ. ಟಿ. ವೆಂಕಟೇಶ್ವರ ಉಪಸ್ಥಿತರಿದ್ದರು.

ರೇವತಿ ಕೆ. ಸ್ವಾಗತಿಸಿದರು. ನಾಗೇಶ್ ಪಾದೆ ಪ್ರಸ್ತಾವನೆಗೈದರು. ಶ್ರೀಪತಿ ನಾಯಕ್, ಜತ್ತಪ್ಪ ಅಡ್ಯಾಲು, ಚಿದಾನಂದ ಪೆಲತ್ತಿಂಜ ನಾನಾ ಜವಾಬ್ದಾರಿ ನಿರ್ವಹಿಸಿದರು. ಯತೀಶ್ ಕೇದಗೆದಡಿ ವಂದಿಸಿದರು. ಅಶ್ವಿನಿ ಕುಂಡಡ್ಕ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here