Wednesday, September 27, 2023

ಆರಾಧನಾ ಫ್ರೆಂಡ್ಸ್ ಸರ್ಕಲ್ ವಾರ್ಷಿಕೋತ್ಸವ ಆರಾಧನಾ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ

Must read

ಬಂಟ್ವಾಳ: ಬಿ.ಸಿ.ರೋಡ್ ಬಪಾಸ್ ಆರಾಧನಾ ಫ್ರೆಂಡ್ಸ್ ಸರ್ಕಲ್ ಇದರ 31ನೇ ವಾರ್ಷಿಕೋತ್ಸವ ಪ್ರಯುಕ್ತ ಯಕ್ಷಗಾನ ಬಯಲಾಟ ಹಾಗೂ ಆರಾಧನಾ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಿ.ಸಿ.ರೊಡು ಸ್ಪರ್ಶಾ ಕಲಾಮಂದಿರ ದಲ್ಲಿ ಜರಗಿತು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ತೆಂಕುತಿಟ್ಟಿನ ಹಿರಿಯ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರಿಗೆ ಯಕ್ಷಗಾನ ಪೋಷಕ ದಿ. ಮರಿಯಪ್ಪಯ್ಯ ಹೊಳ್ಳ ಕಳ್ಳಿಮಾರು ಅವರ ಸ್ಮರಣಾರ್ಥ ಆರಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿವೃತ್ತ ಪ್ರಾದ್ಯಾಪಕ ಡಾ| ಶಿವರಾಮ ಹೊಳ್ಳ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವುದರಿಂದ ಅವರ ಕಲಾಸೇವೆಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ. ಕಿರಿಯ ಕಲಾವಿದರಿಗೆ ಮುಂದಕ್ಕೆ ಬರಲು ಪ್ರೇರಣೆಯಾಗುತ್ತದೆ. ವರ್ಷಂಪ್ರತಿ ಪ್ರಶಸ್ತಿ ನೀಡುವ ಮೂಲಕ ಆರಾಧನಾ ಫ್ರೆಂಡ್ಸ್ ಸರ್ಕಲ್ ಉತ್ತಮ ಕಾರ್ಯ ನಡೆಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಎಸೆಸ್ಸೆಲ್ಸಿಯಲ್ಲಿ ಎಸ್‌ವಿಎಸ್ ವಿದ್ಯಾಗಿರಿ ಶಾಲೆಗೆ ಪ್ರಥಮ ಸ್ಥಾನಿಯಾದ ವಿಧಾತ್ರಿ ಸೋಮಯಾಜಿ ಅವರಿಗೆ ಪ್ರತಿಭಾ ಪುರಸ್ಕಾರ, ಸಮ್ಮಾನ ನಡೆಸಲಾಯಿತು.


ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ವಿಶ್ವನಾಥ ಎ., ನಿವೃತ್ತ ಸೇನಾ ಅಧಿಕಾರಿ ಗಣಪತಿ ಸೋಮಯಾಜಿ, ಫ್ರೆಂಡ್ಸ್ ಸರ್ಕಲ್ ಪದಾಧಿಕಾರಿಗಳಾದ ನರೇಶ್ ಕುಮಾರ್ ಕಳ್ಳಿಮಾರ್, ಗಣೇಶ್, ಯೋಗೀಶ್, ಪ್ರಕಾಶ್, ಪೃಥ್ವಿರಾಜ್, ಸಂಜೀವ ಕೊಟ್ಟಾರಿ, ರಾಮಚಂದ್ರ ಮಯ್ಯ, ಸುರೇಶ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಪರಮೇಶ್ವರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

More articles

Latest article