Saturday, October 21, 2023

ಧರ್ಮಸ್ಥಳದಲ್ಲಿ ವಜ್ರ ಪಂಜರ ಆರಾಧನೆ

Must read

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಂಗಳವಾರ ವಜ್ರ ಪಂಜರ ಆರಾಧನೆ ನಡೆಯಿತು.
ಆಚಾರ್ಯ 108 ಶ್ರೀ ವರ್ಧಮಾನ ಸಾಗರ್ಜಿ ಮಹಾರಾಜರು ಮತ್ತು ಆಚಾರ್ಯ 108 ಶ್ರೀ ಪುಷ್ಪದಂತ ಸಾಗರ್ಜಿ ಮುನಿಮಹಾರಾಜ್ ಹಾಗೂ ಮುನಿ ಸಂಘದವರು ಮತ್ತು ಮಾತಾಜಿಯವರು ಉಪಸ್ಥಿತರಿದ್ದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಮತ್ತು ಶ್ರದ್ಧಾ ಅಮಿತ್ ಹಾಗೂ ಸ್ಥಳೀಯ ಶ್ರಾವಕಿಯರು ಆರಾಧನೆಯಲ್ಲಿ ಭಾಗವಹಿಸಿ ಪುಣ್ಯಭಾಗಿಗಳಾದರು.

ಧರ್ಮಸ್ಥಳ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಜನಮಂಗಲ ಕಾರ್ಯಕ್ರಮಗಳ ಉದ್ಘಾಟನೆ:

ಉಜಿರೆ: ಧರ್ಮಸ್ಥಳದಲ್ಲಿ ನಡೆಯುವ ಭಗವಾನ್ ಬಾಹುಬಲಿ ಮಸ್ತಕಾಭಿಷೇಕದ ಅಂಗವಾಗಿ ನಡೆಯುವ ಜನಮಂಗಲ ಕಾರ್ಯಕ್ರಮವನ್ನು ಇದೇ 10 ರಂದು ಭಾನುವಾರ ಸಂಜೆ 4 ಗಂಟೆಗೆ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡ್ಯೂರಪ್ಪ ಉದ್ಘಾಟಿಸುವರು.
ಗೃಹ ಸಚಿವ ಎಂ.ಬಿ. ಪಾಟೀಲ್, ಶಾಸಕರುಗಳಾದ ಕೆ.ಎಸ್. ಈಶ್ವರಪ್ಪ ಮತ್ತು ಹರೀಶ್ ಪೂಂಜ, ಜಿಲ್ಲಾ ಪಂಚಾಯಿತಿ ಸದಸ್ಯ ಕೊರಗಪ್ಪ ನಾಯ್ಕ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಜನಾರ್ದನ್ ಶುಭಾಶಂಸನೆ ಮಾಡುವರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.

ಕ್ಷುಲ್ಲಕ ದೀಕ್ಷೆ: ಭಾನುವಾರ ಬೆಳಿಗ್ಗೆ ಎಂಟುಗಂಟೆಗೆ ಪೂಜ್ಯ ಪುಷ್ಪದಂತ ಸಾಗರ ಮುನಿ ಮಹಾರಾಜರರಿಂದ ಪೂರನ್ ಬೈಯ್ಯಾಜಿ ಮತ್ತು ಶ್ರೀಪ್ರಭು ಬೈಯ್ಯಾಜಿ ಅವರಿಗೆ ಕ್ಷುಲ್ಲಕ ದೀಕ್ಷೆ ನೀಡುವ ಕಾರ್ಯಕ್ರಮವಿದೆ.

More articles

Latest article