Wednesday, October 18, 2023

ಶ್ರೀರಾಮ ಪದವಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

Must read

ಬಂಟ್ವಾಳ: ಶ್ರೀರಾಮ ಪದವಿ ಕಾಲೇಜಿನಲ್ಲಿ ಪ್ರಣತಿ ಇಂಗ್ಲೀಷ್ ಸಂಘದ ಸಹಯೋಗದೊಂದಿಗೆ ಐ.ಕ್ಯೂ.ಎ.ಸಿ. ಮತ್ತು ವೃತ್ತಿ ಮಾರ್ಗದರ್ಶನ ಘಟಕ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಎನ್ ಜಿ ಒ ವೀಡಿಯಂನ ಸಂಸ್ಥಾಪಕ  ಆಚಾರ್ಯ ಅಜಿತ್ ಕುಮಾರ್ ಉದ್ಘಾಟಿಸಿ ಭಾರತದ ಸಂಸ್ಕೃತಿ ಮಹತ್ತರವಾದದ್ದು. ಇದರ ಅರಿವು ಮೂಡಬೇಕಾದರೆ ಇತಿಹಾಸದ ಜ್ಞಾನ ಪಡೆಯುವುದು ಅನಿವಾರ್‍ಯ. ಯಾವಾಗ ಭಾರತದ ಇತಿಹಾಸ ತಿಳಿಯುವುದೋ ಅಂದು ಭಾರತೀಯರ ಸಾಮರ್ಥ ತಿಳಿಯಲು ಸಾಧ್ಯ. ಭಾರತದ ಮೂಲಭಾಷೆಯಾದ ಸಂಸ್ಕೃತವು ಇಂದು ದೇಶ-ವಿದೇಶಗಳಲ್ಲಿ ತನ್ನ ಛಾಪನ್ನು ಮೂಡಿಸಿ ನಾಸಾದ ವಿಜ್ಞಾನಿಗಳು ಕೂಡಾ ಈ ಭಾಷೆಯ ಬಗ್ಗೆ ತಿಳಿಯ ಹೊರಟಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.
ವೇದಿಕೆಯಲ್ಲಿ ಜನತಾ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಹಾಗೂ ವಿಡಿಯಂನ ಸದಸ್ಯೆ ವೀಣಾ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್., ಪ್ರಣತಿ ಇಂಗ್ಲೀಷ್ ಸಂಘದ ನಿರ್ಧೇಶಕಿ ಶ್ರೀಮತಿ ಎಲ್ ಶ್ರೀದೇವಿ ಉಪಸ್ಥಿತರಿದ್ದರು.
ಅತಿಥಿಗಳನ್ನು ವಿದ್ಯಾರ್ಥಿಗಳಾದ ಕವಿತಾ ಸ್ವಾಗತಿಸಿ, ಅನುಷಾ ವಂದಿಸಿ, ನೇಹಾ ರಾಥೋರ್ ಕಾರ್ಯಕ್ರಮ ನಿರೂಪಿಸಿದರು.

More articles

Latest article