ಉಜಿರೆ: ಹಾಸನದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರಶ್ಯಾದೇಶದ 260 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಸಿಚನೋವ ವಿಶ್ವ ವಿದ್ಯಾಲಯ ಪರಸ್ಪರ ಸಹಯೋಗದ ಒಡಂಬಡಿಕೆ ಮಾಡಿಕೊಂಡಿದ್ದು ಬುಧವಾರ ಧರ್ಮಸ್ಥಳದಲ್ಲಿ ಹಾಸನದ ಎಸ್.ಡಿ.ಎಂ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಸಿಚನೋವ ವಿಶ್ವ ವಿದ್ಯಾಲಯದ ಹಿರಿಯ ನಿರ್ದೇಶಕರಾದ ಡಾ.ಲಿಮ್ ವಾಲ್ಡಿಮಿರ್‌ ಒಡಂಬಡಿಕೆ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಸಿಚನೋವ ವಿಶ್ವ ವಿದ್ಯಾಲಯದ ಸಹ ನಿರ್ದೇಶಕರಾದ ಗೆಲಿನಾ ಕೋಪೆಲಿವಜ್, ಹಾಸನದ ಎಸ್.ಡಿ.ಎಂ.ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನಯನ್. ರಾವ್, ಸಂಶೋಧನಾ ವಿಭಾಗದಡೀನ್‌ ಡಾ.ಸುಹಾಸ್‌ ಕುಮಾರ್ ಶೆಟ್ಟಿ, ಪ್ರೊ.ಅಶ್ವಿನಿ ಕುಮಾರ್ ಮತ್ತು ಡಾ.ಪಾವೆಲ್ ಪೆರೆಸಿ ಪ್‌ಕೀನ್‌ ಉಪಸ್ಥಿತರಿದ್ದರು.
ಪ್ರಸ್ತುತ ಒಡಂಬಡಿಕೆಯಂತೆ ಆಯುರ್ವೇದ ಕ್ಷೇತ್ರದಲ್ಲಿ ಸಂಶೋಧನೆ, ವಿಚಾರ ಸಂಕಿರಣ, ಕಾರ್ಯಾಗಾರ, ಸಮ್ಮೇಳನ, ಪರಸ್ಪರ ವಿಚಾರ ವಿನಿಮಯ,ಅನುದಾನ, ಪ್ರಶಸ್ತಿ, ಆರೋಗ್ಯ ಸೇವೆ ಮೊದಲಾದ ಚಟುವಟಿಕೆಗಳನ್ನು ಒಳಗೊಂಡಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here