ಬಂಟ್ವಾಳ: ತಾಲೂಕು ಬರಿಮಾರು ಗ್ರಾಮದ ಮುಳ್ಳಿಬೈಲುಬೆಟ್ಟು ಗಣೇಶ್ ಮತ್ತು ರೂಪ ದಂಪತಿಗಳ ಒಂದೂವರೆ ವರ್ಷದ ಜೀವನ್ ನ ಮೆದುಳಿಗೆ ಹೋಗುವ ಹಾಗೂ ಹೊರ ಬರುವ ನರ ಬ್ಲಾಕ್ ಅದ ಕಾರಣ ಸುಮಾರು 4 ಲಕ್ಷ ವೆಚ್ಚದಲ್ಲಿ ಎಂಜಿಯೋಗ್ರಾಫ್ ಮಾಡಿ ತಲೆ ಆಪರೇಶನ್ ಮಾಡಬೇಕೆಂದು ವೈದರು ಸಲಹೆ ನೀಡಿದರು.

ಮಗುವಿನ ಚಿಕಿತ್ಸೆಗೆ ರೂಪರವರಲ್ಲಿ ಇದ್ದ ಮಾಂಗಲ್ಯ ಸರವನ್ನು ಮಾರಿ, ಸಾಲ ಸೋಲ ಮಾಡಿ ಇದುವರೆಗಿನ ವೆಚ್ಚ ಬರಿಸಿದ್ದು, ಇನ್ನು ಮುಂದಿನ ಮಗುವಿನ ಚಿಕಿತ್ಸೆಗೆ ರೂ.25,000 ಚೆಕ್ ಅನ್ನು ಮತ್ತು ಬಂಟ್ವಾಳ ತಾಲೂಕು ಕೂರಿಯಾಳ ದುರ್ಗಾನಗರ ಕುಶಲ ದಿನೇಶ್ ಪೂಜಾರಿಯವರ ಬಡತನದ ನಡುವೆಯೂ ಸುಖವಾದ ಸಂಸಾರ. ದಿನೇಶ್ ರವರು ತನ್ನ ಜೀವನ ಬಂಡಿಯನ್ನು ಮುಂದೆ ಸಾಗಿಸಲು ಮಂಗಳೂರಿನಲ್ಲಿ ಹೋಟೆಲ್ ನಲ್ಲಿ ಉದ್ಯೋಗ ಮಾಡುತ್ತಿದ್ದರು. ಆದರೆ ಕಳೆದ 4 ತಿಂಗಳ ಹಿಂದೆ ದಿನೇಶ್ ರವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ವೈದರು ಪರೀಕ್ಷಿಸಿದಾಗ ಕರುಳು ಕ್ಯಾನ್ಸರ್ ಎಂದು ತಿಳಿದು ಬಂದಿದ್ದು ಆಧಾರವಾಗಿದ್ದ ಮನೆ ಯಜಮಾನ ಅನಾರೋಗ್ಯಕ್ಕೆ ತುತ್ತಾಗಿ ಮಾಡುತ್ತಿದ್ದ ಕೆಲಸವು ಬಿಡುವಂತಾಯಿತು. ಕಷ್ಟದ ಮೇಲೆ ಕಷ್ಟ ಪಡುತ್ತಿರುವ ಈ ಕುಟುಂಬದ ಮನೆ ಯಜಮಾನನ ಚಿಕಿತ್ಸೆಗೆ ರೂ.25,000 ಚೆಕ್ ಅನ್ನು ಇಂದು ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ.ಸಿ ರೋಡ್ ಇಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.