Thursday, October 19, 2023

ತುಳಸೀವನ ಮಂದಿರದ ವಾರ್ಷಿಕೋತ್ಸವ

Must read

ಬಂಟ್ವಾಳ : ಅವಿಭಕ್ತ ಕುಟುಂಬ ವಿಭಕ್ತ ಆಗಿರುವುದರಿಂದ ನಮ್ಮ ಮನೆಯಲ್ಲಿ ಮಕ್ಕಳು ದಾರಿ ತಪ್ಪುತ್ತಿದ್ದಾರೆ ವಿಭಕ್ತ ಕುಟುಂಬದಿಂದಾಗಿ ಈಗಿನ ಮಕ್ಕಳಿಗೆ ಸಂಸ್ಕಾರದ ಕೊರತೆಯಾಗಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ  ಕಮಲಾ ಪ್ರಭಾಕರ ಭಟ್ ಕಲ್ಲಡ್ಕ ಅಭಿಪ್ರಾಯಪಟ್ಟರು ಇವರು ಬೋಳಂತೂರು ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದ 16 ನೇ ವರ್ಷದ ವಾರ್ಷಿಕೋತ್ಸವ ದಲ್ಲಿ ಮಾತನಾಡಿ ಮಕ್ಕಳಿಗೆ ಸಣ್ಣಂದಿನಿಂದಲೇ ಒಳ್ಳೆಯ ಸಂಸ್ಕಾರ ಕೊಟ್ಟರೆ ಮಾತ್ರ ಮುಂದೆ ನಮ್ಮ ದೇಶಕ್ಕೆ ಮತ್ತು ಸಮಾಜಕ್ಕೆ ಆಸ್ತಿಯಾಗುತ್ತಾರೆ.


ರಾಮಾಯಣ ಮಹಾಭಾರತದಂತಹ ಕಥೆಗಳನ್ನು ಮಕ್ಕಳಿಗೆ ಹೇಳುವುದರಿಂದ ಉತ್ತಮ ವ್ಯಕ್ತಿತ್ವ ರೂಪಿಸಬಹುದೆ ವಿನಾ ಮಕ್ಕಳ ಕೈಗೆ ಮೊಬೈಲ್ ಗಳನ್ನು ಕೊಡುವುದರಿಂದ ಅಲ್ಲ, ಕಾಲೇಜು ಹೆಣ್ಣು ಮಕ್ಕಳಿಗೆ ಮೊಬೈಲ್ ಮತ್ತು ಫ್ಯಾಷನ್ ಡ್ರೆಸ್ ಗಳಿಂದಲೇ ಲವ್ ಜಿಹಾದ್ ಗಳಂತಹ ಘಟನೆಗಳು ಹೆಚ್ಚಾಗಿರುವುದು, ಎಂದು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಬಿ.ಲಿಂಗಪ್ಪ ಮಾಸ್ಟರ್ ಪೊಸಳ್ಳಿ ಬಿ.ಸಿ ರೋಡ್ ವಹಿಸಿ ಮಾತನಾಡಿ ಸಂಸ್ಕಾರವನ್ನು ಮಗುವಿಗೆ ಹೊಟ್ಟೆಯಲ್ಲಿರುವಾಗಲೇ ಕಳಿಸಬಹುದು ಎಂದು ನಮ್ಮ ಪುರಾತನ ಗ್ರಂಥವಾದ ಮಹಾಭಾರತದಲ್ಲಿ ಉಲ್ಲೇಖವಿದೆ ಇಂದು ಇದನ್ನು ನಮ್ಮ ವಿಜ್ಞಾನಿಗಳು ಒಪ್ಪುವ ಕಾಲ ಬಂದಿದೆ, ಭಜನಾ ಮಂದಿರವು ಒಂದು ಊರಿನಲ್ಲಿ ಇದ್ದರೆ ಆ ಊರಿನಲ್ಲಿ ದುಷ್ಟ ಶಕ್ತಿಗಳು ನಾಶವಾಗುತ್ತದೆ ಅದೇ ರೀತಿ ಯುವಕರಲ್ಲಿ ದುಷ್ಟ ಚಟಗಳು ದೂರವಾಗುತ್ತದೆ. ಎಂದು ನುಡಿದರು, ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಯ ಗೌರವಾನ್ವಿತ ಸದಸ್ಯರಾದ ಶ್ರೀ ನೇಮಿರಾಜ್ ರೈ ಬೋಳಂತೂರು, ಭಜನಾ ಮಂಡಳಿ ಅಧ್ಯಕ್ಷರಾದ ಸಂಕಪ್ಪ ಮೂಲ್ಯ ನೆಕ್ಕರಾಜೆ,ಉತ್ಸವ ಸಮಿತಿ ಅಧ್ಯಕ್ಷರಾದ ಗಂಗಾಧರ ನೆಕ್ಕರಾಜೆ, ವಿಶ್ವಸ್ಥ ಮಂಡಳಿಯ ಮಾಜಿ ಅಧ್ಯಕ್ಷರಾದ ಮಹಾಬಲ ರೈ ಬೋಳಂತೂರು ಹೊಸಮನೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು, ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿ,ನೇಮಿರಾಜ್ ರೈ ಸ್ವಾಗತಿಸಿ ಸುಧಾಕರ ರೈ ವಂದಿಸಿದರು.

More articles

Latest article