ಬಂಟ್ವಾಳ : ಎಸ್ 4 ನಿರ್ಮಾಣ ದಲ್ಲಿ ಮೂಡಿಬರುತ್ತಿರುವ ಕಿರುಚಿತ್ರ *ತುಮುಲ* ಬಿಡುಗಡೆಗೆ ಸಿದ್ಧಗೊಂಡಿದೆ.

ರಕ್ತ ಸಂಬಂಧ ದಲ್ಲಿ ಮದುವೆಗಳಾದಾಗ ಉಂಟಾಗುವ ಸಮಸ್ಯೆಯೊಂದನ್ನು ಆಧರಿಸಿದ ಕಥಾವಸ್ತು ತುಮುಲ ಹೊಂದಿದೆ.

ಇದರ ಮುಖ್ಯ ಪಾತ್ರದಲ್ಲಿ ಕೊಂಕಣಿ ಭಾಷೆಯ *ಅಂತು* ಮತ್ತು *ಸಂಸಾರು* ತುಳುಚಿತ್ರ *ದೆಯಿ ಬೈದೆತಿ* ಹಾಗು ಪ್ರಶಸ್ತಿ ವಿಜೇತ ಕಿರುಚಿತ್ರ *ಮೌನಮಾತಾದಾಗ* ಮುಂತಾದವು ಗಳಲ್ಲಿ ನಟಿಸಿರುವ ಸುಬ್ರಹ್ಮಣ್ಯ ಪೈ ನಟಿಸಿದ್ದಾರೆ.
ಇವರೊಂದಿಗೆ ವಂದಿತ ಕುಡ್ವ, ಕೃತಿ ಕಾರಂತ್ ವೀಣಾ ಪಂಡಿತ್ ಶ್ರುತಿ ಸುವರ್ಣ ಶಿವಶಂಕರ ಮಯ್ಯ ಅಭಿನಯಿಸಿದ್ದಾರೆ. *ಪಡ್ಡಾಯಿ* ಖ್ಯಾತಿಯ ಸದಾಶಿವ ನೀನಾಸಂ ಇವರ ನಿರ್ದೇಶನ ಸಹಕಾರವಿದೆ. ತಾಂತ್ರಿಕ ನಿರ್ವಹಣೆ ಬಾಲಸುಬ್ರಹ್ಮಣ್ಯ ನೂಜಿ, ಶಶಿಕುಮಾರ್ ಮತ್ತು ಸತೀಶ್ ಬಿ. ಸಾಹಿತ್ಯ ಅನುಶ್ರೀ ಪುತ್ತೂರಾಯ ಅವರದ್ದು.
ಹಲವಾರು ಭಾಷೆಗಳ ಸಿನಿಮಾಗಳಿಗೆ ಸಂಗೀತ ಸಂಯೋಜಕರಾಗಿರುವ ಯುವ ಗಾಯಕ ನಕುಲ್ ಅಭ್ಯಂಕರ್ ರವರ ಸಂಗೀತವಿದೆ.
ಈ ಕಿರುಚಿತ್ರವು ಇದೇ ತಿಂಗಳ 15ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶಕ್ತಿ ಪ್ರಸಾದ್ ಅಭ್ಯಂಕರ್ ಇವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here