ಬಂಟ್ವಾಳ: ಕೇಂದ್ರ ಸರಕಾರ ಮಂಡಿಸಿದ ಮಧ್ಯಂತರ ಬಜೆಟ್ ಬಗ್ಗೆ ಜನಪ್ರತಿನಿಧಿಗಳು ಏನು ಹೇಳುತ್ತಾರೆ.

ಶಾಸಕ ರಾಜೇಶ್ ನಾಯಕ್ : ಜನಸಾಮಾನ್ಯರಿಗೆ ಅನುಕೂಲವಾಗುವ ಅತ್ಯುತ್ತಮ ಬಜೆಟ್ ಇದಾಗಿದೆ. ಈ ಬಜೆಟ್ ನ್ನು ಯಾರೂ ಟೀಕಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಮಂಡನೆ ಮಾಡಿದ್ದಾರೆ.
ರೈತರ ಸಹಿತ ಎಲ್ಲಾ ವರ್ಗದ ಜನರಿಗೆ ಸಮತೋಲನ ಕಾಯ್ದುಕೊಂಡು ಉತ್ತಮ ರೀತಿಯ ಬಜೆಟ್ ಮಂಡಿಸಿದ್ದಾರೆ. ಜನ ಮೆಚ್ಚುತ್ತಾರೆ ಎಂದು ಹೇಳಿದರು.

ಮಾಜಿ ಸಚಿವ ಬಿ.ರಮಾನಾಥ ರೈ: ಜನರ ಕಣ್ಣೊರೆಸುವ ಬಜೆಟ್ ಇದಾಗಿದ್ದು, ಜನ ಸಾಮಾನ್ಯನಿಗೆ ಅನುಕೂಲವಾಗುವ ಬಜೆಟ್ ಇದಲ್ಲ, ರೈತರಿಗೆ ಉಪಯೋಗವಾಗುವ ರೀತಿಯಲ್ಲಿ ಬಜೆಟ್ ಮಂಡಿಸಿದ್ದಾರೆ ಅದರೂ ಅನುಷ್ಟಾನಕ್ಕೆ ಬರುತ್ತಾ ಅನ್ನುವುದು ಗ್ಯಾರಂಟಿ ಇಲ್ಲ. ಉದ್ದಿಮೆದಾರರ ಸಾಲ ಮನ್ನಾ ಮಾಡಿದ ಸರಕಾರ ರೈತರ ಸಾಲ ಮನ್ನಾದ ಬೇಡಿಕೆಯನ್ನು ಮಾತ್ರ ತಿರಸ್ಕರಿಸಿದೆ ಎಂದು ಹೇಳಿದರು.

 

ತಾ.ಪಂ.ಸದಸ್ಯ ಪ್ರಭಾಕರ ಪ್ರಭು: ಜನಸಾಮಾನ್ಯರ ಜನಪ್ರಿಯ ಬಜೆಟ್: ರಕ್ಷಣಾ ವೆಚ್ಚಹೆಚ್ಚಳದೊಂದಿಗೆ ರಾಷ್ಟ್ರ ಕಾಯುವ ಯೋಧರಿಗೆ ವಿಶೇಷ ಯೋಜನೆ, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಉತ್ತೇಜನ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಲ್ಯಾಣ ನಿಧಿ ಹೆಚ್ಚಳ, ರಸ್ತೆ, ರೈಲ್ವೆ, ಸೇತುವೆ, ವಿದ್ಯುತ್, ನೀರು, ಆರೋಗ್ಯ, ಶಿಕ್ಷಣಕ್ಕೆ ಶಿಕ್ಷಣಕ್ಕೆ ಮಹತ್ವ, ಅಸಂಘಟಿತ ಕಾರ್ಮಿಕ, ಸಣ್ಣ ರೈತ, ಮಧ್ಯಮ ವರ್ಗದ ಏಳಿಗೆಗೆ ಹೊತ್ತು, ಒಟ್ಟಾರೆಯಾಗಿ ದೂರ ದೃಷ್ಟಿಯ ಜನಪ್ರಿಯ ಬಜೆಟ್ ಆಗಿದೆ.

 

ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ: ಇದೊಂದು ನಿರಾಸೆ ಯ ಬಜೆಟ್, ಕೇವಲ ಜನರಿಗೆ ತುಪ್ಪ ಸವರುವ ರೀತಿಯಲ್ಲಿ ಇದೆ ಎಂದರು.

ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ:
ಕೊನೆಯ ಕ್ಷಣದಲ್ಲಿ ಜನರ ಮತಪಡೆಯಲು ಸಣ್ಣ ಪ್ರಯತ್ನ ಮಾಡಿದ್ದಾರೆ, ಜನರು ಕಳೆದ 5 ವರ್ಷದ ಆಡಳಿತ ನೋಡಿದ್ದಾರೆ, ಯಾವುದೇ ಲಾಭವಿಲ್ಲದ ನಿರಾಸೆಯ ಬಜೆಟ್ ಇದಾಗಿದೆ ಎಂದರು.

ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ: ಜನಸಾಮಾನ್ಯರಿಗೆ ಮೋದಿ ವಿಶೇಷ ಕೊಡುಗೆಯನ್ನು ನೀಡುವ ಮ‌ೂಲಕ ಜನಸಾಮಾನ್ಯರ, ರೈತರ ಪ್ರೀತಿ ಗೆ ಪಾತ್ರರಾಗಿದ್ದಾರೆ. ಅದಾಯದ ಮಿತಿಯಲ್ಲಿನ ಘೋಷಣೆ ನಿಜಕ್ಕೂ ಉತ್ತಮವಾದ ಯೋಚನೆ.
ರೈತರಿಗೆ ಬಹಳಷ್ಟು ಕೊಡುಗೆ ಮೋದಿ ನೀಡಿದ್ದಾರೆ.

ಜಿ.ಪಂ.ಸದಸ್ಯೆ ಮಂಜುಳಾ ಮಾದವ ಮಾವೆ:
5 ವರ್ಷಗಳಲ್ಲಿ ಮೋದಿ ಸರಕಾರ ಬಡ ವರ್ಗದವರಿಗೆ ಉಪಯೋಗ ವಾಗುವ ಯಾವುದೇ ಯೋಜನೆ ನೀಡಿಲ್ಲ, ಇವರ ಮೇಲೆ ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ಅದಾಯ ತೆರಿಗೆ ವಿನಾಯತಿ ಎಲ್ಲರಿಗೂ ಮಾಡಿದ್ದರೆ ಪ್ರಯೋಜನ ವಾಗುತ್ತಿತ್ತು. ರೈತರು ಮತ್ತೆ ಸಾಲದಲ್ಲಿಯೇ ಇರುವಂತಾಗಿದೆ ಎಂದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here