Tuesday, October 31, 2023

ವಿಟ್ಲ: ಚುನಾವಣೆ ತರಬೇತಿ

Must read

ವಿಟ್ಲ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 205ರಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿಟ್ಲ ಹೋಬಳಿಗೆ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್‍ಯಾಗಾರ ವಿಟ್ಲದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆಯಿತು.
ತಹಶೀಲ್ದಾರ್ ರಶ್ಮಿ ಎಸ್. ಅವರು ತರಬೇತಿ ನೀಡಿದರು. ಮತದಾರರ ಪಟ್ಟಿಗೆ ಮಿಂಚಿನ ನೋಂದಾವಣೆ, ಮತದಾರ ಪಟ್ಟಿ ಪರಿಶೀಲನೆ, ಮತದಾನ ಕೇಂದ್ರದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಮತದಾರ ದೂರವಾಣಿ ಸಂಖ್ಯೆ ದಾಖಲಿಸುವ, ಮತಗಟ್ಟೆಗಳ ಬಗ್ಗೆ ಮೂಲ ಸೌಕರ್‍ಯಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.
ವಿಟ್ಲ ಕಂದಾಯ ನಿರೀಕ್ಷಕ ದಿವಾಕರ್ ಹಾಗೂ ನಾನಾ ಗ್ರಾಮಗಳ ಗ್ರಾಮ ಕರಣಿಕರು ಭಾಗವಹಿಸಿದ್ದರು.

More articles

Latest article