Wednesday, October 25, 2023

ಮಹಾಮಸ್ತಕಾಭಿಷೇಕಕ್ಕೆ ತೆರಳುವ ಭಕ್ತಾಧಿಗಳಿಗೆ ಬಿ.ಸಿ.ರೋಡಿನಲ್ಲಿ ಸ್ವಾಗತದ್ವಾರ

Must read

ಬಂಟ್ವಾಳ: ಫೆ.9 ರಿಂದ 18 ರವರೆಗೆ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಅಂಗವಾಗಿ ಬಿಸಿರೋಡಿನಿಂದ ಧರ್ಮಸ್ಥಳ ತೆರಳುವ ಭಕ್ತಾಧಿಗಳಿಗೆ ಸ್ವಾಗತಕೋರುವ ಸ್ವಾಗತದ್ವಾರವನ್ನು ಬಿ.ಸಿ.ರೋಡಿನ ಬ್ರಹ್ಮ ಶ್ರೀ ವ್ರತ್ತ ದ ಬಳಿ ಬಂಟ್ವಾಳ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನಿರ್ಮಿಸಲಾಗಿದೆ.
ಈ ಸ್ವಾಗತ ದ್ವಾರವನ್ನು ಗುರುವಾರ ಬೆಳಿಗ್ಗೆ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ನೆಲ್ಯಾಡಿ ಉದ್ಘಾಟಿಸಿದರು.
ಈ‌ಸಂದರ್ಭದಲ್ಲಿ ಬಿಸಿರೋಡಿನ ಜನಜಾಗ್ರತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿ.ಸೋಜ, ಕೇಂದ್ರ ಒಕ್ಕೂಟದ ಅಧ್ಯಕ್ಷ ಮಾದವ ವಳವೂರು, ಕೇಂದ್ರ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಸದಾನಂದ ನಾವೂರ, ಕೃಷ್ಟಪ್ಪ ಪೂಜಾರಿ, ಬಂಟ್ವಾಳ ವಲಯ ಅಧ್ಯಕ್ಷ ವಸಂತ ಮೂಲ್ಯ, ಬಿಸಿರೋಡ ವಲಯ ಅಧ್ಯಕ್ಷ ಶೇಖರ್ ಕಾಮಾಜೆ, ಯೋಜನಾಧಿಕಾರಿ ಜಯಾನಂದ ಪಿ.ಪ್ರಮುಖರಾದ ಪದ್ಮನಾಭ ಪರಂಗಿಪೇಟೆ, ಗಂಗಾದರ, ಪಶುಪತಿ, ಸತ್ಯಪ್ರಸಾದ್, ಯತೀಶ್ ವಿಟ್ಲ, ದಾಮೋದರ ನಲ್ಕೆಮಾರ್, ವಾಮನ ಪೂಪಾಡಿಕಟ್ಟೆ, ವಾಮನ ಪಕ್ಜೆರೊಟ್ಟು, ನಿತಿನ್ ನಲ್ಕೆಮಾರ್, ಗೋಪಾಲ, ಕೃಷ್ಣ ಶಾಂತಿ, ಧನುಷ್, ತಿಮ್ಮಪ್ಪ, ನಾರಾಯಣ, ನಾರಾಯಣ ಮೆಲ್ಕಾರ್, ಜನಾರ್ಧನ, ತಿಲಕ್ , ಹಾಗೂ ಮೇಲ್ವಿಚಾರಕರಾದ, ಶಶಿದರ್  , ರಮೇಶ್, ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು.

More articles

Latest article