ಬಂಟ್ವಾಳ: ಜಮ್ಮು ಕಾಶ್ಮೀರದ ಲ್ಲಿ ಭಯೋತ್ಪಾದಕರ ಧಾಳಿಗೆ ತುತ್ತಾದ ಸಿ ಆರ್ ಪಿ ಎಫ್ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅಮರರಾದ ಯೋಧರಿಗೆ ಒಂದರಂತೆ ಹಣತೆ ಹಚ್ಚಿ ಸಲ್ಲಿಸಲಾಯಿತು.ಪ್ರಾರಂಭದಲ್ಲಿ ನಿವೃತ್ತ ರಾದ ವೀರ ಯೋಧ ಶ್ರೀ ಬಾಲಚಂದ್ರ ರವರು ಹಣತೆ ಹಚ್ಚಿ ಭಯೋತ್ಪಾದಕರ ಅಮಾನುಷ ಕೃತ್ಯವನ್ನು ಖಂಡಿಸಿ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರ ದು:ಖದಲ್ಲಿ ನಾವು ಪಾಲುಗಾಲರಾಗೋಣ ಹಾಗೂ ದು:ಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಹಾರೈಸಿದರು.ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಶ್ರೀ ಡಿ ಎಂ ಕುಲಾಲ್, ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಶೇಷಪ್ಪ ಮಾಸ್ಟರ್ ಯೋಧರ ಆತ್ಮಕ್ಕೆ ಶಾಂತಿ ಕೋರಿದರು.

ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.ಶ್ರೃಧ್ಧಾಂಜಲಿ ಸಭೆ ಯಲ್ಲಿ ಬಂಟ್ವಾಳ ತಾಲೂಕು ಕುಂಬಾರ ಯುವ ವೇದಿಕೆ ಅಧ್ಯಕ್ಷ ರಾದ ಸುಕುಮಾರ್ ಬಂಟ್ವಾಳ ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಕುಂಬಾರ ಮಹಿಳಾ ಸಂಘ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷೆ ಭಾರತಿ ಶೇಷಪ್ಪ ಹಾಗೂ ಪದಾಧಿಕಾರಿಗಳು, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಉಪಾಧ್ಯಕ್ಷರಾದ ಕೃಷ್ಣ ಶ್ಯಾಂ ಹಾಗೂ ಪದಾಧಿಕಾರಿಗಳು, ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ನಮಿತಾ ಹಾಗೂ ಪದಾಧಿಕಾರಿಗಳು, ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಓಬಯ್ಯ ಮೂಲ್ಯ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.