Wednesday, October 25, 2023

ಪಿಲಾತಬೆಟ್ಟು ವ್ಯ.ಸೇ.ಸ.ಸಂಘ ಕೆ.ಲಕ್ಷ್ಮೀ ನಾರಾಯಣ ಉಡುಪ ಅಧ್ಯಕ್ಷರಾಗಿ ಆಯ್ಕೆ

Must read

ಬಂಟ್ವಾಳ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘ ಪುಂಜಾಲಕಟ್ಟೆ ಇದರ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಕೆ.ಲಕ್ಷ್ಮೀ ನಾರಾಯಣ ಉಡುಪ ಮತ್ತು ಉಪಾಧ್ಯಕ್ಷರಾಗಿ ಉಮೇಶ್ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.
ಶುಕ್ರವಾರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವಿರೋಧವಾಗಿ ಈ ಆಯ್ಕೆ ನಡೆಯಿತು. ಕೆ. ಲಕ್ಷ್ಮಿ ನಾರಾಯಣ ಉಡುಪ ಅವರು ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷರಾಗಿದ್ದಾರೆ. ಅವರು ಪಿಲಾತಬೆಟ್ಟು ವ್ಯ. ಸೇ. ಸ. ಸಂಘದಲ್ಲಿ ಈ ಹಿಂದೆ ಎರಡು ಅವಧಿಗೆ ಅಧ್ಯಕ್ಷರಾಗಿದ್ದು, ಸಂಘದ ಅಭಿವೃದ್ದಿಗೆ ಶ್ರಮ ವಹಿಸಿದ್ದರು.
ನಿರ್ದೇಶಕರಾದ ಬೂಬ ಸಪಲ್ಯ, ಸೀತಾರಾಮ ಶೆಟ್ಟಿ, ಚಂದ್ರಶೇಖರ ಹೆಗ್ಡೆ, ನಾರಾಯಣ ಪೂಜಾರಿ, ಸಂತೋಷ್ ಕುಮಾರ್ ಶೆಟ್ಟಿ, ಪ್ರಭಾಕರ ಪಿ. ಎಂ., ಹರ್ಷಿಣಿ ಪುಷ್ಪಾನಂದ, ಸರೋಜಾ ಡಿ. ಶೆಟ್ಟಿ, ಶಿವಯ್ಯ , ಸುಂದರ ನಾಯ್ಕ, ದಿನೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.
ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿ ಎನ್. ಜೆ. ಗೋಪಾಲ್ ಅವರು ಆಯ್ಕೆ ಪ್ರಕ್ರಿಯೆ ನಡೆಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು.

More articles

Latest article