ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಕನ್ಯಾನ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಏಕದಿನದ ಮತಪ್ರವಚನ, ಮಜ್ಲಿಸ್‌ನ್ನೂರ್ ಹಾಗೂ ಮಹಾಸಂಗಮ ಕನ್ಯಾನದ ಗೋಳಿಕಟ್ಟೆಯ ಹಝ್ರತ್ ಶಾಹುಲ್ ಹಮೀದ್ ವಲಿಯುಲ್ಲಾ ನಗರದ ಶಂಸುಲ್ ಉಲಮಾ ವೇದಿಕೆಯಲ್ಲಿ ಮಂಗಳವಾರ ರಾತ್ರಿ ನಡೆಯಿತು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯದುಲ್ ಉಲಮಾ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಮಹಾಸಂಗಮವನ್ನು ಉದ್ಘಾಟಿಸಿದರು. ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆಃ ನೆರವೇರಿಸಿದರು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಸೈಯದ್ ಬಾತಿಷ ತಂಙಳ್ ಆನೆಕಲ್ಲು ಅಧ್ಯಕ್ಷತೆ ವಹಿಸಿದ್ದರು. ಸಾಲೆತ್ತೂರು ಖತೀಬ್ ಮಜೀದ್ ದಾರಿಮಿ ಕುಂಬ್ರ ಪ್ರಸ್ತಾವಿಸಿ, ಸಮಸ್ತದ ನಡೆದು ದಾರಿಯ ಬಗ್ಗೆ ಮೆಲುಕುಹಾಕಿದರು.
ಅಂತರಾಷ್ಟ್ರೀಯ ಪ್ರಭಾಷಣಗಾರ ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರು ಮುಖ್ಯ ಪ್ರಭಾಷಣ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಸಮಸ್ತದ ಆದರ್ಶಗಳ ಬಗ್ಗೆ ಮಾತನಾಡಿದರು.

ವಾರ್ಷಿಕೋತ್ಸವಕ್ಕೆ ಚಾಲನೆ:
ಮಂಗಳವಾರ ಬೆಳಿಗ್ಗೆ ಸ್ವಾಗತ ಸಮಿತಿ ಚೇಯರ್ಮೆನ್ ಎಸ್.ಕೆ.ಉಮರ್ ಉಸ್ತಾದ್ ಕನ್ಯಾನ ಧ್ವಜಾರೋಹಣ ನೆರವೇರಿಸಿ, ವಾಷಿಕೋತ್ಸವಕ್ಕೆ ಚಾಲನೆ ನೀಡಿದರು. ಸಂಜೆ ಕೆ.ಎಸ್. ಅಲಿ ತಂಙಳ್ ಕುಂಬೋಲ್ ನೇತೃತ್ವದಲ್ಲಿ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ.ಅ) ಝಿಯಾರತ್ ನಡೆಯಿತು. ಬಳಿಕ ಎಸ್ಕೆಐಎಂವಿ ಬೋರ್ಡ್‌ನ ಕಾರ್ಯದರ್ಶಿ ಶೈಖುನಾ ಎಂ.ಎ. ಖಾಸಿಂ ಉಸ್ತಾದ್ ನೇತೃತ್ವದಲ್ಲಿ ಮಜ್ಲಿಸ್‌ನ್ನೂರ್ ನಡೆಯಿತು. ಸಮಸ್ತ ಕರ್ನಾಟಕ ಮುಶಾವರ ಕಾರ್ಯದರ್ಶಿ ಶೈಖುನಾ ಬಿ.ಕೆ. ಅಬ್ದುಲ್ ಖಾದರ್ ಖಾಸಿಮಿ ಪ್ರವಚನ ಮಾಡಿದರು.
ವೇದಿಕೆಯಲ್ಲಿ ಸೈಯದ್ ಹಾದಿ ತಂಙಳ್ ಮೊಗ್ರಾಲ್, ಸೈಯದ್ ಜಿಫ್ರಿ ತಂಙಳ್ ಆತೂರು, ಸೈಯದ್ ಅಮೀರ್ ತಂಙಳ್ ಕಿನ್ಯ, ಶೈಖುನಾ ಅಹ್ಮದ್ ಮುಸ್ಲಿಯಾರ್, ಖಾಸಿಂ ದಾರಿಮಿ ಕಿನ್ಯಾ, ಅಬ್ದುಲ್ ರಶೀದ್ ಹಾಜಿ, ಆಸೀಫ್ ಅಬ್ದುಲ್ಲ ಉಳ್ಳಾಲ, ಉಳ್ಳಾಲ ಎಸ್‌ಎಂಎ ಕಾಜೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರು, ಹಾರೂನ್ ಅಹ್ಸನಿ, ಖಾಸಿಂ ದಾರಿಮಿ ಕಿನ್ಯ, ಹಮೀದ್ ಮುಸ್ಲಿಯಾರ್ ಕೊನಾಲೆ ಕನ್ಯಾನ, ಮಜೀದ್ ದಾರಿಮಿ, ಮಾಹಿನ್ ದಾರಿಮಿ ಪಾತೂರು, ಅಬ್ದುಲ್ ರಝಾಕ್ ಮಿಸ್ಬಾಹಿ, ಶರೀಫ್ ಫೈಝಿ ಕಡಬ, ಅಬ್ದುಲ್ ರಹ್ಮಾನ್ ತಬೂಕ್, ಮುಹಮ್ಮದ್ ಫೈಝಿ ಕಜೆ, ಅಬ್ದುಲ್ ರಹ್ಮಾನ್ ಹೈತಮಿ, ಶರೀಫ್ ಮುಸ್ಲಿಯಾರ್ ಕಜೆ, ಜಮಾಲುದ್ದೀನ್ ದಾರಿಮಿ ಗಡಿಯಾರ, ಇಸ್ಮಾಯಿಲ್ ಹಾಜಿ ಕಲ್ಕಾರ್, ಇಸ್ಮಾಯಿಲ್ ಹಾಜಿ ಬಾಳೆಕೋಡಿ, ಅಶ್ರಫ್ ಗೋಳಿಕಟ್ಟೆ, ರಶೀದ್ ಹಾಜಿ ಪರ್ಲಡ್ಕ, ಹನೀಫ್ ಹಾಜಿ ಬಂದರ್, ಉಸೈನ್ ದಾರಿಮಿ ರೆಂಜಿಲಾಡಿ, ಇಬ್ರಾಹಿಂ ಕಡವ, ಶರೀಫ್ ಕೆಳಿಂಜ, ಆರಿಫ್ ಕರಾಯಿ, ಎಂ.ಎಸ್. ಮುಹಮ್ಮದ್ ಉಪಸ್ಥಿತರಿದ್ದರು.
ಕೆ.ಎಂ.ನಝೀರ್ ದಾರಿಮಿ ಕನ್ಯಾನ ಕಿರಾಅತ್ ಪಠಿಸಿದರು. ಸ್ವಾಗತ ಸಮಿತಿಯ ಕನ್ವೀನರ್ ಕೆ.ಕೆ.ರಫೀಕ್ ಫೈಝಿ ಸ್ವಾಗತಿಸಿ, ಕಲಂದರ್ ಕುಕ್ಕಾಜೆ ವಂದಿಸಿ, ನಿಝಾಂ ಅನ್ಸಾರಿ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here