Sunday, April 7, 2024

ಎಸ್ಕೆಎಸ್ಸೆಸ್ಸೆಫ್ ಕನ್ಯಾನ ಶಾಖೆಯ ಪ್ರಥಮ ವಾರ್ಷಿಕೋತ್ಸವ, ಮತಪ್ರವಚನ, ಮಜ್ಲಿಸ್‌ನ್ನೂರ್

ವಿಟ್ಲ: ಎಸ್ಕೆಎಸ್ಸೆಸ್ಸೆಫ್ ಕನ್ಯಾನ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಏಕದಿನದ ಮತಪ್ರವಚನ, ಮಜ್ಲಿಸ್‌ನ್ನೂರ್ ಹಾಗೂ ಮಹಾಸಂಗಮ ಕನ್ಯಾನದ ಗೋಳಿಕಟ್ಟೆಯ ಹಝ್ರತ್ ಶಾಹುಲ್ ಹಮೀದ್ ವಲಿಯುಲ್ಲಾ ನಗರದ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಿತು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯದುಲ್ ಉಲಮಾ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಮಹಾಸಂಗಮವನ್ನು ಉದ್ಘಾಟಿಸಿದರು. ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆಃ ನೆರವೇರಿಸಿದರು.
ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಸೈಯದ್ ಬಾತಿಷ ತಂಙಳ್ ಆನೆಕಲ್ಲು ಅಧ್ಯಕ್ಷತೆ ವಹಿಸಿದ್ದರು. ಸಾಲೆತ್ತೂರು ಖತೀಬ್ ಮಜೀದ್ ದಾರಿಮಿ ಕುಂಬ್ರ ಪ್ರಸ್ತಾವಿಸಿ, ಸಮಸ್ತದ ನಡೆದು ದಾರಿಯ ಬಗ್ಗೆ ತಿಳಿಸಿದರು.
ಅಂತರಾಷ್ಟ್ರೀಯ ಪ್ರಭಾಷಣಗಾರ ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರು ಮುಖ್ಯ ಪ್ರಭಾಷಣ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಸಮಸ್ತದ ಆದರ್ಶಗಳ ಬಗ್ಗೆ ಮಾತನಾಡಿದರು.

ವಾರ್ಷಿಕೋತ್ಸವಕ್ಕೆ ಚಾಲನೆ:
ಮಂಗಳವಾರ ಬೆಳಿಗ್ಗೆ ಸ್ವಾಗತ ಸಮಿತಿ ಚೇಯರ್ಮೆನ್ ಎಸ್.ಕೆ.ಉಮರ್ ಉಸ್ತಾದ್ ಕನ್ಯಾನ ಧ್ವಜಾರೋಹಣ ನೆರವೇರಿಸಿ, ವಾಷಿಕೋತ್ಸವಕ್ಕೆ ಚಾಲನೆ ನೀಡಿದರು. ಸಂಜೆ ಕೆ.ಎಸ್. ಅಲಿ ತಂಙಳ್ ಕುಂಬೋಲ್ ನೇತೃತ್ವದಲ್ಲಿ ಶಾಹುಲ್ ಹಮೀದ್ ವಲಿಯುಲ್ಲಾಹಿ (ರ.ಅ) ಝಿಯಾರತ್ ನಡೆಯಿತು. ಬಳಿಕ ಎಸ್ಕೆಐಎಂವಿ ಬೋರ್ಡ್‌ನ ಕಾರ್ಯದರ್ಶಿ ಶೈಖುನಾ ಎಂ.ಎ. ಖಾಸಿಂ ಉಸ್ತಾದ್ ನೇತೃತ್ವದಲ್ಲಿ ಮಜ್ಲಿಸ್‌ನ್ನೂರ್ ನಡೆಯಿತು. ಸಮಸ್ತ ಕರ್ನಾಟಕ ಮುಶಾವರ ಕಾರ್ಯದರ್ಶಿ ಶೈಖುನಾ ಬಿ.ಕೆ. ಅಬ್ದುಲ್ ಖಾದರ್ ಖಾಸಿಮಿ ಪ್ರವಚನ ಮಾಡಿದರು.
ವೇದಿಕೆಯಲ್ಲಿ ಸೈಯದ್ ಹಾದಿ ತಂಙಳ್ ಮೊಗ್ರಾಲ್, ಸೈಯದ್ ಜಿಫ್ರಿ ತಂಙಳ್ ಆತೂರು, ಸೈಯದ್ ಅಮೀರ್ ತಂಙಳ್ ಕಿನ್ಯ, ಶೈಖುನಾ ಅಹ್ಮದ್ ಮುಸ್ಲಿಯಾರ್, ಖಾಸಿಂ ದಾರಿಮಿ ಕಿನ್ಯಾ, ಅಬ್ದುಲ್ ರಶೀದ್ ಹಾಜಿ, ಆಸೀಫ್ ಅಬ್ದುಲ್ಲ ಉಳ್ಳಾಲ, ಉಳ್ಳಾಲ ಎಸ್‌ಎಂಎ ಕಾಜೇಜಿನ ಪ್ರಿನ್ಸಿಪಾಲ್ ಉಸ್ಮಾನ್ ಫೈಝಿ ತೋಡಾರು, ಹಾರೂನ್ ಅಹ್ಸನಿ, ಖಾಸಿಂ ದಾರಿಮಿ ಕಿನ್ಯ, ಹಮೀದ್ ಮುಸ್ಲಿಯಾರ್ ಕೊನಾಲೆ ಕನ್ಯಾನ, ಮಜೀದ್ ದಾರಿಮಿ, ಮಾಹಿನ್ ದಾರಿಮಿ ಪಾತೂರು, ಅಬ್ದುಲ್ ರಝಾಕ್ ಮಿಸ್ಬಾಹಿ, ಶರೀಫ್ ಫೈಝಿ ಕಡಬ, ಅಬ್ದುಲ್ ರಹ್ಮಾನ್ ತಬೂಕ್, ಮುಹಮ್ಮದ್ ಫೈಝಿ ಕಜೆ, ಅಬ್ದುಲ್ ರಹ್ಮಾನ್ ಹೈತಮಿ, ಶರೀಫ್ ಮುಸ್ಲಿಯಾರ್ ಕಜೆ, ಜಮಾಲುದ್ದೀನ್ ದಾರಿಮಿ ಗಡಿಯಾರ, ಇಸ್ಮಾಯಿಲ್ ಹಾಜಿ ಕಲ್ಕಾರ್, ಇಸ್ಮಾಯಿಲ್ ಹಾಜಿ ಬಾಳೆಕೋಡಿ, ಅಶ್ರಫ್ ಗೋಳಿಕಟ್ಟೆ, ರಶೀದ್ ಹಾಜಿ ಪರ್ಲಡ್ಕ, ಹನೀಫ್ ಹಾಜಿ ಬಂದರ್, ಉಸೈನ್ ದಾರಿಮಿ ರೆಂಜಿಲಾಡಿ, ಇಬ್ರಾಹಿಂ ಕಡವ, ಶರೀಫ್ ಕೆಳಿಂಜ, ಆರಿಫ್ ಕರಾಯಿ, ಎಂ.ಎಸ್. ಮುಹಮ್ಮದ್ ಉಪಸ್ಥಿತರಿದ್ದರು.
ಕೆ.ಎಂ.ನಝೀರ್ ದಾರಿಮಿ ಕನ್ಯಾನ ಕಿರಾಅತ್ ಪಠಿಸಿದರು. ಸ್ವಾಗತ ಸಮಿತಿಯ ಕನ್ವೀನರ್ ಕೆ.ಕೆ.ರಫೀಕ್ ಫೈಝಿ ಸ್ವಾಗತಿಸಿದರು. ಕಲಂದರ್ ಕುಕ್ಕಾಜೆ ವಂದಿಸಿದರು. ನಿಝಾಂ ಅನ್ಸಾರಿ ಕಾರ್‍ಯಕ್ರಮ ನಿರೂಪಿಸಿದರು.

More from the blog

ರಾಜ್ಯದಲ್ಲಿ 60 ಮಂದಿಯ ನಾಮಪತ್ರ ತಿರಸ್ಕೃತ

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...