ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇಲ್ಲಿನ ಮತದಾರರ ಸಾಕ್ಷರತಾ ಸಂಘ, ರೋಟರ್‍ಯಾಕ್ಟ್ ಕ್ಲಬ್, ರೋವರ್‍ಸ್ & ರೇಂಜರ್‍ಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಮತದಾರರ ಜಾಗೃತಿ ಕುರಿತ ಪ್ರಭಾತ ಫೇರಿ ನಡೆಸಲಾಯಿತು.
ಪೂರ್ವಾಹ್ನ 9 ಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಪ್ರಾಧ್ಯಾಪಕ ವೃಂದ ಜೊತೆಯಾಗಿ ಪ್ರಥಮ ದರ್ಜೆ ಕಾಲೇಜಿನ ಆವರಣದಿಂದ ಹೊರಟು ಸಿದ್ಧಕಟ್ಟೆಯ ಸುತ್ತಮುತ್ತಲಿನ ಮಂಚಕಲ್ಲು, ಮೇಲುಗುಡ್ಡೆ ಹಾಗೂ ಅಜ್ಜಿಬಾಕ್ಯಾರು ಪ್ರದೇಶಗಳಲ್ಲಿ ಮತದಾರರ ಜಾಗೃತಿ ಮೆರವಣಿಗೆ ನಡೆಸಲಾಯಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವಂತೆ ಕಾಲೇಜಿನ ವಿದ್ಯಾರ್ಥಿಗಳು ಮಾಹಿತಿ ಒದಗಿಸಿದರು. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ನೋಂದಾಯಿಸಲು ಹುರಿದುಂಬಿಸಲಾಯಿತು. ಮತದಾರರ ಪಟ್ಡಿಯಲ್ಲಿನ ನೋಂದಾಯಿತ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲು ಪ್ರೇರೇಪಿಸಲಾಯಿತು. ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಘೋಷಣೆಗಳು, ಪ್ಲಕಾರ್ಡ್ ಹಾಗೂ ಬ್ಯಾನರ್‌ಗಳೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮರಳಿ ಕಾಲೇಜಿನ ಆವರಣವನ್ನು ತಲುಪಿರುತ್ತಾರೆ.
