ಬಂಟ್ವಾಳ: ಅಮ್ಟೂರು ಗ್ರಾಮದ ಶಾಂತಿಪಲ್ಕೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಕಾಂಕ್ರೀಟ್ ಕರಣಕ್ಕೆ ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ ಶಿಲಾನ್ಯಾಸ ನೆರವೇರಿಸಿದರು.
ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ ಅವರ ಐದು ಲಕ್ಷ ಅನುದಾನದಲ್ಲಿ ಈ ರಸ್ತೆಯ ಕಾಂಕ್ರೀಟ್ ನಡೆಯಲಿದ್ದು , ಈ ಭಾಗದ ತಾ.ಪಂ ಸದಸ್ಯ ಮಹಾಬಲ ಆಳ್ವ ರಸ್ತೆ ಅಭಿವೃದ್ದಿಗೆ ಅನುದಾನ ನೀಡುವ ಭರವಸೆ ಇದೇ ಸಂದರ್ಭದಲ್ಲಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ.ತಾ.ಪಂ.ಉಪಾಧ್ಯಕ್ಷ ದಿನೇಶ್ ಅಮ್ಟೂರು, ಗ್ರಾಮ ಪಂಚಾಯತ್ ಸದಸ್ಯ ರಾದ ಗೋಪಾಲಕೃಷ್ಣ ಪೂವಳ, ಗೋಪಾಲ ಪೂಜಾರಿ, ಗ್ರಾಮದ ಪ್ರಮುಖ ರಾದ ನಂದಗೋಕುಲ ಮಹಾಬಲ ಶೆಟ್ಟಿ, ರಮೇಶ್ ಶೆಟ್ಟಿಗಾರ್, ಪುರುಷೋತ್ತಮ ಟೈಲರ್, ಬಾಲಿಕೆ ವಿಶಾಲ್ ಕೆ.ಶೆಟ್ಟಿ, ವೇಣುಗೋಪಾಲ ಶೆಟ್ಟಿ ಗಾರ್, ಹರೀಶ್ ಕರಿಂಗಾಣ, ಶರತ್ ಕುಮಾರ್ ಅಮ್ಟೂರು ನಾರಾಯಣ ಪೂಜಾರಿ, ಸುಂದರ ಶಾಂತಿಪಲ್ಕೆ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.