Thursday, September 28, 2023

ವಿಟ್ಲ: ಯಕ್ಷಸಿಂಧೂರ ವತಿಯಿಂದ ಕಲಾವಿದರಿಗೆ ಸನ್ಮಾನ, ಬಯಲಾಟ

Must read

ವಿಟ್ಲ : ವಿಟ್ಲ ಯಕ್ಷ ಸಿಂಧೂರ ಪ್ರತಿಷ್ಠಾನದ ವತಿಯಿಂದ ವಿಟ್ಲ ಶ್ರೀ ಭಗವತೀ ದೇವಸ್ಥಾನದ ಜಾತ್ರೆ ಮಹೋತ್ಸವ ಸಂದರ್ಭ ಬಾಲಕಲಾವಿದರ ಬಯಲಾಟ, ಹಿರಿಯ ಕಲಾವಿದರಿಗೆ ಸಮ್ಮಾನ ಮತ್ತು ಪ್ರಸಿದ್ಧ ಕಲಾವಿದರ ಬಯಲಾಟ ಮಂಗಳವಾರ ನಡೆಯಿತು.
ಶ್ರೀ ಕಟೀಲು ಮೇಳದ ನಿವೃತ್ತ ಹಿಮ್ಮೇಳ ವಾದಕ ಪೆರುವಾಯಿ ನಾರಾಯಣ ಭಟ್ ಅವರಿಗೆ ಯಕ್ಷಸಿಂಧೂರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಳ್ಯ ಪ್ರತಿಭಾ ವಿದ್ಯಾಲಯದ ಪ್ರಾಚಾರ್‍ಯ ವೆಂಕಟರಾಮ ಭಟ್ ಸುಳ್ಯ ಅಭಿನಂದನ ಭಾಷಣ ಮಾಡಿದರು.
ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಡಾ.ಚರಣ್ ಕಜೆ ಭಾಗವಹಿಸಿದ್ದರು. ಇದೇ ಸಂದರ್ಭ ಕಸಾಪ ವತಿಯಿಂದ ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಅವರನ್ನು ಸಮ್ಮಾನಿಸಲಾಯಿತು. ಕಲಾವಿದ, ಉಪನ್ಯಾಸಕ ರಾಧಾಕೃಷ್ಣ ಕಲ್ಚಾರ್ ಅಭಿನಂದನ ಭಾಷಣ ಮಾಡಿದರು.
ಯಕ್ಷ ಸಿಂಧೂರ ಪ್ರತಿಷ್ಠಾನದ ಸಂಚಾಲಕ ಚಣಿಲ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಶ್ರೀಧರ ವನಭೋಜನ ನಿರೂಪಿಸಿದರು. ಹಿಮ್ಮೇಳ ನಾದನಿನಾದ ಕಾರ್‍ಯಕ್ರಮ, ಕರ್ಗಲ್ಲು ವಿಶ್ವೇಶ್ವರ ಭಟ್ ನಿರ್ದೇಶನದಲ್ಲಿ ಬಾಲಕಲಾವಿದರಿಂದ ಪ್ರಮೀಳಾ ಸಂಧಾನ ವೀರ ವೈಷ್ಣವ ಯಕ್ಷಗಾನ ಬಯಲಾಟ ಮತ್ತು ಪ್ರಸಿದ್ಧ ಕಲಾವಿದರಿಂದ ಸತ್ವ ಪರೀಕ್ಷೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.

More articles

Latest article