ವಿಟ್ಲ: ದೇವರಿಗೆ ಹೆದರಿ ಜೀವನ ನಡೆಸುವ ವ್ಯಕ್ತಿಗಳಿಗೆ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಹೆತ್ತವರನ್ನು ನೋಯಿಸುವವರು ಎಂದಿಗೂ ಜೀವನದಲ್ಲಿ ಮುಂದೆ ಸಾಧ್ಯವಿಲ್ಲ. ಅದಕ್ಕೆ ಯಾವುದೇ ಪರಿಹಾರವಿಲ್ಲ. ಮಹಿಳೆಯರು ಧಾರ್ಮಿಕ ಶಿಕ್ಷಣ ಪಡೆದಾಗ ಊರಿಗೆ ಹಾಗೂ ಕುಟುಂಬಕ್ಕೆ ಸಹಕಾರಿಯಾಗಲಿದೆ ಎಂದು ಪುತ್ತೂರು ಕಲ್ಲೇಗ ಜುಮಾ ಮಸೀದಿ ಖತೀಬು ಅಬೂಬಕ್ಕರ್ ಸಿದ್ದಿಕ್ ಜಲಾಲೀ ಹೇಳಿದರು.
ಅವರು ವಿಟ್ಲದ ಮೇಗಿನಪೇಟೆ ಅಲ್ಖೈರ್ ಶರೀಯತ್ ಮಹಿಳಾ ಕಾಲೇಜಿನಲ್ಲಿ ನಡೆದ ಶಿಕ್ಷಕ-ರಕ್ಷಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ತಮ್ಮ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವುದರ ಜತೆಗೆ ಇಸ್ಲಾಮಿನ ಧಾರ್ಮಿಕ ಚೌಕಟ್ಟಿನಲ್ಲಿ ಬದುಕು ರೂಪಿಸುವಂತೆ ಮಾಡುವ ಜವಾಬ್ದಾರಿ ಹೆತ್ತವರ ಮೇಲಿದೆ. ಶರೀಯತ್ ಕಾಲೇಜುಗಳ ಮೂಲಕ ಮಹಿಳೆಯರು ಇಸ್ಲಾಮಿನ ಆಚಾರ-ವಿಚಾರಗಳು ಕಲಿಯಲು ಸಾಧ್ಯವಿದೆ. ಹೆತ್ತವರು ಧಾರ್ಮಿಕ ಚೌಕಟ್ಟಿನಲ್ಲಿ ನಡೆದಾಗ ಮಕ್ಕಳು ಕೂಡಾ ಅದನ್ನೇ ಅನುಸರಿಸುತ್ತಾರೆ. ಹೆತ್ತವರು ಅವುಗಳಲ್ಲಿ ಮಾಡದಿದ್ದರೆ ಮಕ್ಕಳಿಗೂ ಅಪಾಯವಿದೆ. ಲೌಕಿಕ ಶಿಕ್ಷಣ ಪಡೆದರೆ ಮಾತ್ರ ಜೀವನ ಸಾರ್ಥಕವಾಗುವುದಿಲ್ಲ. ಧಾರ್ಮಿಕ ಶಿಕ್ಷಣ ಅತ್ಯಾವಶ್ಯಕವಾಗಿದೆ. ಪ್ರತಿಯೊಬ್ಬರು ಅವುಗಳನ್ನು ತಿಳಿದುಕೊಂಡು ತಮ್ಮ ಮಕ್ಕಳು ಮುಂದೆ ಬರಲು ಸಾಧ್ಯವಿದೆ ಎಂದರು.
ಕಾಲೇಜು ಶಿಕ್ಷಕ ಅಬ್ಬಾಸ್ ದಾರಿಮಿ ದುವಾಃ ನೆರವೇರಿಸಿದರು. ಕಾಲೇಜು ಆಡಳಿತ ಸಮಿತಿ ಅಧ್ಯಕ್ಷ ಇಬ್ರಾಹಿಂ ಏರ್ ಸೌಂಡ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಆಡಳಿತ ಸಮಿತಿ ಕಾರ್ಯದರ್ಶಿ ಸಫ್ವಾನ್ ಸಫ್ವಾನ್ ಮಹಮ್ಮದ್, ಸದಸ್ಯರಾದ ಇಬ್ರಾಹಿಂ ಹಾಜಿ ಪೊನ್ನೋಟ್ಟು, ಅಬ್ದುಲ್ ಹಮೀದ್ ಕುದ್ದುಪದವು, ಅಶ್ರಫ್ ಕಬಕ, ಮಹಮೂದ್ ಹಾಜಿ ಮೇಗಿನಪೇಟೆ, ಮಹಮ್ಮದ್ ಅಲಿ ವಿಟ್ಲ ಭಾಗವಹಿಸಿದ್ದರು.
ಕಾಲೇಜು ವ್ಯವಸ್ಥಾಪಕ ಹಕೀಂ ಅರ್ಶದಿ ಸ್ವಾಗತಿಸಿ, ನಿರೂಪಿಸಿದರು.
