Tuesday, October 17, 2023

‘ವಾರ್ತಾ ಭಾರತಿ’ ಉಪಸಂಪಾದಕ ಇಮ್ತಿಯಾಝ್‌ ಶಾಗೆ ಪ.ಗೋ. ಪ್ರಶಸ್ತಿ

Must read

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪ.ಗೋ. ಪ್ರಶಸ್ತಿಗೆ.. ವಾರ್ತಾಭಾರತಿ ಕನ್ನಡ ದೈನಿಕದ ಉಪಸಂಪಾದಕ ಇಮ್ತಿಯಾಝ್ ಶಾ ತುಂಬೆ ಆಯ್ಕೆಯಾಗಿದ್ದಾರೆ.

ಇಮ್ತಿಯಾಝ್ ಶಾ ಅವರ ವಿಶೇಷ ವರದಿ ‘ಕೊಡುವ ಕೈಗಳಿಗಾಗಿ ಕಾಯುತ್ತಿರುವ ಕೊಡಗು’ ಆಗಸ್ಟ್ 31, 2018 ರಂದು ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು.

ಹಿರಿಯ ಪತ್ರಕರ್ತರಾದ ಸುರೇಂದ್ರ ಶೆಟ್ಟಿ, ರೇಶ್ಮ್ಮಾ ಜಿ. ಉಳ್ಳಾಲ್ ಮತ್ತು ಉಪನ್ಯಾಸಕಿ ಡಾ. ಮೌಲ್ಯ ಜೀವನ್ ನೇತೃತ್ವದ ಆಯ್ಕೆ ಸಮಿತಿಯು ಇಮ್ತಿಯಾಝ್ ಶಾ ಅವರ ವರದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.ಪ್ರಶಸ್ತಿಯು 10,001 ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿವೆ.

ಪ್ರಶಸ್ತಿ ಪ್ರದಾನ ಸಮಾರಂಭ ಫೆ.27ರಂದು ಬೆಳಗ್ಗೆ 11:00 ಗಂಟೆಗೆ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಲಿದೆ. ದ.ಕ.ಜಿಲ್ಲಾ ವಾರ್ತಾಧಿಕಾರಿ ಕೆ. ರೋಹಿಣಿ ಪ್ರಶಸ್ತಿ ಪ್ರದಾನ ಮಾಡಲಿರುವರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article