Saturday, October 28, 2023

ಅಮ್ಟೂರು: ಹೊರೆಕಾಣಿಕೆ ಪೂರ್ವಭಾವಿ

Must read

ಬಂಟ್ವಾಳ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಹೊರೆಕಾಣಿಕೆ ಸ್ವೀಕಾರ ವಿಚಾರವಾಗಿ ಪೂರ್ವಭಾವಿ ಸಭೆ ಅಮ್ಟೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.

ಕ್ಷೇತ್ರದ ಬಗ್ಗೆ ಮತ್ತು ಹೊರೆ ಕಾಣಿಕೆ ಕುರಿತು ಬ್ರಹ್ಮಕಲಶೋತ್ಸವ ಸಮಿತಿ ತಾಲೂಕು ಸಂಚಾಲಕ, ಹೊರೆಕಾಣಿಕೆ ಪ್ರಧಾನ ಸಂಚಾಲಕ ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ ವಿವರಿಸಿದರು.

ಅಮ್ಟೂರು ಗ್ರಾಮದ ಸಮಿತಿ ಅಧ್ಯಕ್ಷರಾದ ನಂದಗೋಕುಲ ಮಹಾಬಲ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮನೋಜ್ ಕಟ್ಟೆಮಾರ್, ಉಪಾಧ್ಯಕ್ಷ ರಮೇಶ್ ಶೆಟ್ಟಿಗಾರ್ ಕರಿಂಗಾಣ, ಗ್ರಾಮದ ಸಂಚಾಲಕ ಹಾಗೂ ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಪ್ರಶಾಂತ್ ಆಳ್ವ, ಗ್ರಾಪಂ ಸದಸ್ಯರಾದ ಗೋಪಾಲಕೃಷ್ಣ ಪೂವಳ, ಬಜರಂಗದಳ ಸಂಚಾಲಕ ಕೌಶಲ್ ಶೆಟ್ಟಿ, ಪ್ರಮುಖರಾದ ಪ್ರಥ್ವಿರಾಜ್ ಆಳ್ವ, ಕೃಷ್ಣಪ್ಪ ಕುಲಾಲ್, ವಿಘ್ನೇಶ್ವರ, ದೇವದಾಸ ಕೃಷ್:ಣಾಪುರ, ಬಿಎಸ್ಸೆನ್ನೆಲ್ ಉದ್ಯೋಗಿ ವಿಜಯ ಮುಳಿಕೊಡಂಗೆ, ವಿಖ್ಯಾತ್ ಶೆಟ್ಟಿ, ಶಂಕರ ಬಟ್ಟಿಹಿತ್ಲು, ನಿತಿನ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಅಮ್ಟೂರು ಸ್ವಾಗತಿಸಿದರು. ಜಿತೇಶ್ ಶೆಟ್ಟಿ  ಬಾಳಿಕೆ ವಂದಿಸಿದರು.

More articles

Latest article