Monday, October 30, 2023

ಫೆ.24 ಕಂಚುದೀಪದ ಆಧಾರ ಶಿಲೆ-ಶಿಲಾಪೀಠ ಪೊಳಲಿಗೆ ಸಮರ್ಪಣೆ

Must read

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವು ನವೀಕರಣಗೊಳ್ಳುತ್ತಿದ್ದು, ಮಾ.4 ರಿಂದ ಮಾ.13ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದೆ. ಗಾಣಿಗ ಸಮಾಜದ ವತಿಯಿಂದ ಪೊಳಲಿ ದೇವಸ್ಥಾನಕ್ಕೆ ಸೇವಾ ರೂಪವಾಗಿ ನೀಡಿದ ಕಂಚು ದೀಪವನ್ನು ನವೀಕರಣಗೊಳಿಸಲಾಗುತ್ತಿದ್ದು, ಇದರ ಆಧಾರ ಶಿಲೆ ಮತ್ತು ಶಿಲಾಪೀಠವನ್ನು ಫೆ.24ರ ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಪಾದಯಾತ್ರೆಯಲ್ಲಿ ಭವ್ಯ ಮೆರವಣಿಗೆಯ ಮೂಲಕ ಶ್ರೀಕ್ಷೇತ್ರಕ್ಕೆ ತಲುಪಿಸುವ ಕೆಲಸ ನಡೆಯಲಿದೆ. ಸಮಸ್ತ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರವಾಗುವಂತೆ ಅಧ್ಯಕ್ಷರು ಮತ್ತು ಸರ್ವಸದಸ್ಯರು ಶ್ರೀ ಪೊಳಲಿ ದೀಪಸ್ತಂಭ ನವೀಕರಣ ಸಮಿತಿಯ ಪ್ರಕಟನೆ ತಿಳಿಸಿದೆ.

More articles

Latest article